Siddapura: ಫೆ.4: ಮೆಟ್ಕಲ್ ಗುಡ್ಡೆ ಮಹಾಗಣಪತಿ ದೇವಸ್ಥಾನದ  ವರ್ಧಂತ್ಯುತ್ಸವ

Siddapura: ಫೆ.4: ಮೆಟ್ಕಲ್ ಗುಡ್ಡೆ ಮಹಾಗಣಪತಿ ದೇವಸ್ಥಾನದ ವರ್ಧಂತ್ಯುತ್ಸವ


ಸಿದ್ದಾಪುರ: ಉಡುಪಿ ಜಿಲ್ಲೆಯ ಹೊಸಂಗಡಿಯಿಂದ 6 ಕಿ.ಮೀ. ದೂರದಲ್ಲಿರುವ ಸಮುದ್ರ ಮಟ್ಟದಿಂದ 2000 ಅಡಿಗೂ ಮೆಲ್ಪಟ್ಟು ಎತ್ತರದಲ್ಲಿರುವ ಮೆಟ್ಕಲ್ ಗುಡ್ಡೆಯ ಶ್ರೀ ಮಹಾಗಣಪತಿ ದೇವಸ್ಥಾನದ ವರ್ಧಂತ್ಯುತ್ಸವವು ಫೆ. 4 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ  ನಡೆಯಲಿರುವುದು.

ಬೆಳಿಗ್ಗೆ 10 ಗಂಟೆಯಿಂದ 108 ಕಾಯಿ ಗಣಹೋಮ, ಶ್ರೀ ನಾಗ ದೇವರಿಗೆ ಕಳಶಾಭಿಷೇಕ, ಸತ್ಯನಾರಾಯಣ ಪೂಜೆ,  ಪಂಚ ರುದ್ರ ಹೋಮ, ಚೌಡಿಗೆ ನವಕ ಪ್ರದಾನ, ಗಣಪತಿ ದೇವರಿಗೆ ಪ್ರದಾನ ಕಲಾಶಾಬಿಷೇಕ ಹಾಗೂ ಮಧ್ಯಾಹ್ನ  1 ಗಂಟೆಗೆ ಮಹಾ ಪೂಜೆ, ಮಂಗಳಾರತಿ, ‌ತೀರ್ಥ ಪ್ರಸಾದ ವಿತರಣೆ, ಬಳಿಕ ಅನ್ನಸಂತರ್ಪಣೆ  ಕಾರ್ಯಕ್ರಮ ನಡೆಯಲಿದೆ. ಹಾಗೂ ಸಂಜೆ ಸ್ಥಳೀಯ ಭಜನಾ ಮಂಡಳಿ ಅವರಿಂದ ಕಾರ್ಯಕ್ರಮ ಜರುಗಲಿರುವುದೆಂದು ದೇವಳದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article