Udupi: ಉಡುಪಿ-ಪುತ್ತೂರು ಶ್ರೀ ಮಾಸ್ತಿ ಅಮ್ಮ ದೇವಸ್ಥಾನದಲ್ಲಿ ಚಂಡಿಕಾಯಾಗ ಮತ್ತು ದುರ್ಗಾ ನಮಸ್ಕಾರ
Sunday, February 18, 2024
ಉಡುಪಿ: ಇಲ್ಲಿನ ಸಂತೆಕಟ್ಟೆಯ ರಾಷ್ಟ್ರೀಯ ಹೆದ್ದಾರಿ-66 ಅಂಬಾಗಿಲು ಸಮೀಪದಲ್ಲಿರುವ ಉಡುಪಿ-ಪುತ್ತೂರು ಶ್ರೀ ಮಾಸ್ತಿ ಅಮ್ಮ ದೇವಸ್ಥಾನದಲ್ಲಿ ಫೆ.16 ರಂದು ಪುತ್ತೂರು ನಾಯಕ್ ಕುಟುಂಬಸ್ಥರಿಂದ ಬೆಳಿಗ್ಗೆ 8 ಗಂಟೆಗೆ ನವಕ ಪ್ರಧಾನ ಕಲಶಾರಾಧನೆ. 10 ಗಂಟೆಗೆ ಚಂಡಿಕಾ ಹೋಮ, 12.30ಕ್ಕೆ ಪೂರ್ಣಾಹುತಿ, ಶ್ರೀ ಮಾಸ್ತಿ ಅಮ್ಮನವರಿಗೆ ವಿಶೇಷ ಹೂವಿನ ಅಲಂಕಾರ ಪೂಜೆ, ಸುವಾಸಿನಿ ಪೂಜೆ, ಮಹಾ ಮಂಗಳಾರತಿ, ಅನ್ನ ಸಂತರ್ಪಣೆ ಕಾರ್ಯಕ್ರಮ ನೆರವೇರಿತು.
ಸಂಜೆ 6 ಗಂಟೆಗೆ ದುರ್ಗಾ ನಮಸ್ಕಾರ ಪೂಜೆ, ರಾತ್ರಿ 8 ಗಂಟೆಗೆ ಶ್ರೀ ಮಾಸ್ತಿಅಮ್ಮ ದೇವರ ಪೂಜೆ ಹಾಗೂ ದರ್ಶನ ಸೇವೆಯು ಉಡುಪಿ-ಪುತ್ತೂರು ಶ್ರೀ ಮಾಸ್ತಿ ಅಮ್ಮ ದೇವಸ್ಥಾನದಲ್ಲಿ ನಡೆಯಿತು.
ನರಹರಿ ಎಸ್. ನಾಯಕ್ ಮತ್ತು ನಾಯಕ್ ಕುಟುಂಬಸ್ಥರು ಹಾಗೂ ನಂಬಿದ ಭಕ್ತಾದಿಗಳು ಉಪಸ್ಥಿತರಿದ್ದರು.




