ದ.ಕ. ಲೋಕಸಭಾ ಕ್ಷೇತ್ರ-ಬಿ.ಎಸ್.ಪಿ. ಸ್ಪರ್ಧೆ

ದ.ಕ. ಲೋಕಸಭಾ ಕ್ಷೇತ್ರ-ಬಿ.ಎಸ್.ಪಿ. ಸ್ಪರ್ಧೆ


ಮಂಗಳೂರು: ಲೋಕಸಭಾ ಚುನಾವಣೆಯಲ್ಲಿ ದ.ಕ. ಜಿಲ್ಲೆಯಿಂದ ಬಹುಜನ ಸಮಾಜಪಕ್ಷದಿಂದ ಕಾಂತಪ್ಪ ಅಲಂಗಾರ್ ಅವರು ಸ್ಪರ್ಧಿಸಲಿದ್ದಾರೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಗೋಪಾಲ ಮುತ್ತೂರು ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿ ಮಂಗಳವಾರ ಈ ವಿಷಯ ತಿಳಿಸಿದ ಅವರು, ಎನ್‌ಎಂಪಿಟಿ ಉದ್ಯೋಗಿಯಾಗಿ ಸೇವೆ ಸಲ್ಲಿಸಿರುವ ಕಾಂತಪ್ಪ ಅಲಂಗಾರ್ 2020ರಲ್ಲಿ ನಿವೃತ್ತರಾಗಿದ್ದು, ಜಿಲ್ಲೆಯಲ್ಲಿ ಅಂಬೇಡ್ಕರ್‌ವಾದಿ ಚಳವಳಿಯಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದಾರೆ ಎಂದರು. 

ಪಕ್ಷವು ರಾಜ್ಯದಲ್ಲಿ 25 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದ್ದು, ಬಿಜೆಪಿ ಹಾಗೂ ಇತರ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳು ಚುನಾವಣಾ ಬಾಂಡಿನ ಹೆಸರಿನಲ್ಲಿ ಉದ್ಯಮಿಗಳಿಂದ ಹಣ ಪಡೆದು ಅವರ ಪರವಾಗಿದ್ದಾರೆ. ಆದರೆ ಬಿಎಸ್ಪಿ ಯಾವುದೇ ಉದ್ಯಮಿಗಳಿಂದ ಹಣ ಪಡೆದಿಲ್ಲ ಎಂದರು. 

ಸಂವಿಧಾನದ ಮೂಲಕ ಸಂಸದರಾಗಿ ಆಯ್ಕೆಯಾದವರೇ ಸಂವಿಧಾನ ಬದಲಾಯಿಸುವ ಮಾತನಾಡುತ್ತಿರುವುದು ದೇಶ ದ್ರೋಹವಾಗಿದ್ದು, ಈ ಬಗ್ಗೆ ರಾಜ್ಯ ಸರಕಾರವೂ ಯಾವುದೇ ದಿಟ್ಟ ಕ್ರಮ ಕೈಗೊಳ್ಳದಿರುವುದು ವಿಪರ್ಯಾಸ. ಇದಕ್ಕಿಂತಲೂ ಅಪಾಯಕಾರಿ ಸ್ಥಿತಿ ಎಂದರೆ, ಬಿಜೆಪಿ ಹಾಗೂ ಅದರ ಸರಕಾರವನ್ನು ವಿರೋಧಿಸುವ ಯಾರೇ ಆಗಲಿ ಅವರ ಮೇಲೆ ಈಡಿ, ಐಟಿ ಹಾಗೂಸಿಬಿಐ ಇಲಾಖೆಗಳಿಂದ ದಾಳಿ ನಡೆಸಿ ರಾಜಕೀಯವಾಗಿ ಬೆದರಿಸುವ ಹಾಗೂ ಒತ್ತಡ ಹೇರುವ ಕಾರ್ಯಗಳು ನಡೆಯುತ್ತಿದೆ. ಬಿಜೆಪಿಯ ಈ ನಡವಳಿಕೆ ಸಂವಿಧಾನ ಹಾಗೂ ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಅವರು ಹೇಳಿದರು. 

ಬಿಎಸ್ಪಿಯ ಮುಖಂಡರಾದ ನಾರಾಯಣ ಬೋಧ್, ದೇವಪ್ಪ ಬೋಧ್, ಶಿವಪ್ಪ ಗಾರ್ಡಾಡಿ, ಕಿರಣ್ ಎಡಪದವು, ಪಿ.ಎಸ್. ಶ್ರೀನಿವಾಸ್, ಶಶಿಕಲಾ, ಕಿರಣ್, ಶಿವರಾಮ್ ಪೇಜಾವರ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article