Chikkamagaluru: ಮಾ.11-12: ಕೊಂಗನಾಟಮ್ಮ ದೇವಾಲಯದ ಶಿಖರ ಕುಂಭಾಭೀಷೇಕ ಮಹೋತ್ಸವ
ಚಿಕ್ಕಮಗಳೂರು: ನಗರದ ಶಂಕರಪುರ ಗ್ರಾಮದಲ್ಲಿರುವ ಕೊಂಗನಾಟಮ್ಮ ದೇವಾಲಯದ ಶಿಖರ ಕುಂಭಾಭೀಷೇಕ ಮಹೋತ್ಸವು ಮಾ.11 ಮತ್ತು 12ರಂದು ಜರುಗಲಿದೆ.
ಸೋಮವಾರ ಬೆಳಿಗ್ಗೆ ಬೋಳರಾಮೇಶ್ವರ ದೇವಾಲಯದಿಂದ ಮಂಗಳವಾದ್ಯಗಳೊಂದಿಗೆ ಬೆಳಿಗ್ಗೆ 7 ಗಂಟೆಗೆ 108 ಕಳಸ ಮತ್ತು ಗಂಗೆ ತರುವುದು, ಬೆಳಿಗ್ಗೆ 8 ಗಂಟೆಗೆ ಗೋಪೂಜೆ, ಗಂಗಾಪೂಜೆಯೊಂದಿಗೆ ಮಹಾಸಂಕಲ್ಪ, ಶಿಖರಾಧಿವಾಸ, ಕಳಸ ಪ್ರತಿಷ್ಠೆ ಹಾಗೂ ಮಹಾಮಂಗಳಾರತಿ ಪೂಜೆ, ಸಂಜೆ 4 ಗಂಟೆಗೆ ಅದಿವಾಸಿ ಹೋಮ, ರಕ್ಷೆಘ್ನ ಹೋಮ, ವಾಸ್ತುಹೋಮ, ಬಲಿ ಕರ್ಮಾಧಿಗಳು, ಮಹಾಮಂಗಳಾರತಿ ಅಷ್ಟಾವಧಾನ, ಪ್ರಸಾದ ವಿನಿಯೋಗ ಜರುಗಲಿದೆ.
ಮಾ.12ರಂದು ಬೆಳಿಗ್ಗೆ 8 ಗಂಟೆಗೆ ಕಲಾಹೋಮ, ದೇವಿ ಮೂಲ ಮಂತ್ರಹೋಮ, ಮಹಾಪೂರ್ಣಾಹುತಿ ಜರುಗಲಿದ್ದು ನಂತರ ಹರಿಹರದಪುರದ ಶ್ರೀ ಆದಿಶಂಕರಾಚಾರ್ಯ ಶಾರದಾಲಕ್ಷ್ಮೀ ನರಸಿಂಹ ಪೀಠಾಧೀಶ್ವರ.ಶ್ರೀ. ಸ್ವಯಂಪ್ರಕಾಶ್ ಸಚ್ಚಿದಾನಂದ ಸರಸ್ವತಿ ಶ್ರೀಗಳು ಶಿಖರ ಕುಂಭಾಭಿಷೇಕ ನಡೆಸಿಕೊಡಲಿದ್ದಾರೆ. ನಂತರ ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ ಜರುಲಿದೆ.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಶಾಸಕ ಹೆಚ್.ಡಿ. ತಮ್ಮಯ್ಯ, ಮಾಜಿ ಶಾಸಕ ಸಿ.ಟಿ. ರವಿ, ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ, ಮಾಜಿ ವಿಧಾನಪರಿಷತ್ ಸದಸ್ಯೆ ಗಾಯಿತ್ರಿ ಶಾಂತೇಗೌಡ, ಗುತ್ತಿಗೆದಾರ ಹೆಚ್.ಬಿ. ಸುದರ್ಶನ್, ನಗರಸಭೆ ಅಧ್ಯಕ್ಷ ವರಸಿದ್ದಿವೇಣುಗೋಪಾಲ್, ನಿರ್ಗಮಿತ ಪೌರಾಯುಕ್ತ ಬಸವರಾಜ್, ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ್ ಶೆಟ್ಟಿ, ಕಾಂಗ್ರೆಸ್ ಮುಖಂಡರಾದ ಬಿ.ಎಂ. ಸಂದೀಪ್, ಬಿ.ಹೆಚ್. ಹರೀಶ್, ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಆರ್. ಆನಂದ್ ಭಾಗವಹಿಸಲಿದ್ದಾರೆ.