Kasaragodu: ಲಾರಿ-ಬೈಕ್ ನಡುವೆ ಅಪಘಾತ: ಮೃತ್ಯು

Kasaragodu: ಲಾರಿ-ಬೈಕ್ ನಡುವೆ ಅಪಘಾತ: ಮೃತ್ಯು


ಕಾಸರಗೋಡು: ಟಿಪ್ಪರ್ ಲಾರಿ ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟ ಘಟನೆ ಗುರುವಾರ ರಾತ್ರಿ ಬಂದ್ಯೋಡು ಸಮೀಪದ ಮುಟ್ಟಂ ಎಂಬಲ್ಲಿ ನಡೆದಿದೆ.

ಉಪ್ಪಳ ನಯಬಜಾರ್ ನಾಟೇಕಲ್ ನಿವಾಸಿ ಮುಹಮ್ಮದ್ ಮಿಸ್ಬಾಹ್ (21) ಮೃತಪಟ್ಟ ಯುವಕ. 

ಸಹಸವಾರ ಮಿಸ್ಹಾಬ್ ಎಂಬವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಿಸ್ಬಾಹ್ ಬೈಕಿನಲ್ಲಿ ಕಾಸರಗೋಡಿಗೆ ತೆರಳಿ ಮಿಸ್ಹಾಬ್ ಜೊತೆ ಮರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಇಬ್ಬರು ಮಂಗಳೂರಿನ ಖಾಸಗಿ ಕಾಲೇಯೊಂದರ ವಿದ್ಯಾರ್ಥಿಗಳಾಗಿದ್ದಾರೆ. ಈ ಬಗ್ಗೆ ಕುಂಬಳೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article