Kodagu: ಕೊಡಗು ವಿ.ವಿ. ಸಿಂಡಿಕೇಟ್  ಸೆನೆಟ್  ಸದಸ್ಯರಾಗಿ ಜನಾರ್ದನ್ ನೇಮಕ

Kodagu: ಕೊಡಗು ವಿ.ವಿ. ಸಿಂಡಿಕೇಟ್ ಸೆನೆಟ್ ಸದಸ್ಯರಾಗಿ ಜನಾರ್ದನ್ ನೇಮಕ


ಕೊಡಗು: ಕೊಡಗು ವಿಶ್ವವಿದ್ಯಾಲಯದ ಸಿಂಡಿಕೇಟ್ ಸೆನೆಟ್ ಸದಸ್ಯನಾಗಿ ಶ್ರಿ ಕ್ಷೇತ್ರ ಧರ್ಮಸ್ಥಳದ ಸಿರಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್. ಜನಾರ್ದನ್ ನೇಮಕಗೊಂಡಿದ್ದಾರೆ. 

ಇವರು ರುಡ್ ಸೆಟ್ ಮತ್ತು ಸೆಟಿಗಳ ರಾಷ್ಟ್ರೀಯ ನಿರ್ದೇಶಕರಾಗಿದ್ದು, ದೇಶದಾದ್ಯಂತ 560 ಕ್ಕೂ ಅಧಿಕ ಅರ್ ಸೆಟಿಗಳ  ಸ್ಥಾಪನೆಗೆ ಅರ್ ಸೆಟಿ ಅಧ್ಯಕ್ಷ ಡಾ. ಡಿ. ವೀರೇಂದ್ರ ಹೆಗ್ಗಡೆಯವರೊಂದಿಗೆ ಶ್ರಮಿಸಿದ್ದರು.

ಆರ್ ಸೆಟಿಗಳು ಪ್ರತಿವರ್ಷ 4 ಲಕ್ಷಕ್ಕೂ ಅಧಿಕ ನಿರುದ್ಯೋಗಿ ಯುವ ಜನತೆಗೆ ತರಬೇತಿ ನೀಡುತ್ತಿದ್ದು ಇದರಲ್ಲಿ ಪ್ರತಿ ವರ್ಷ 3 ಲಕ್ಷಕ್ಕೂ ಅಧಿಕ ಮಂದಿ ಸ್ವ ಉದ್ಯೋಗಿಗಳಾಗಿ ಸ್ವಂತ ಜೀವನ ನಡೆಸುತ್ತಾರೆ. 

ಸಿಂಡಿಕೇಟ್ ಬ್ಯಾಂಕ್ ನಲ್ಲಿ ಸತತ 35 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ಇವರು ಬಳಿಕ ಶ್ರಿ ಕ್ಷೇತ್ರ ಧರ್ಮಸ್ಥಳದ ಸಿರಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ. ಅಲ್ಲದೆ ಪ್ರಸ್ತುತ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ರಾಜ್ಯ ಸಬಾಸದಸ್ಯರ ಆಪ್ತ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ. ಇದೀಗ ಕೊಡಗು ವಿ.ವಿ. ಸಿಂಡಿಕೇಟ್ ಸದಸ್ಯರಾಗಿ ದೊಡ್ಡ ಗೌರವಕ್ಕೆ ಪಾತ್ರರಾಗಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article