Kundapura: ಶ್ರೀ ಆದಿಶಕ್ತಿ ಕಾಳೀ ಕ್ಷೇತ್ರ:ಪಡುಕೇರಿ-ಕುಂದಾಪುರದಲ್ಲಿ 41ನೇ ವರ್ಷದ ಮಹಾಶಿವರಾತ್ರಿ ಉತ್ಸವ ಆಚರಣೆ

Kundapura: ಶ್ರೀ ಆದಿಶಕ್ತಿ ಕಾಳೀ ಕ್ಷೇತ್ರ:ಪಡುಕೇರಿ-ಕುಂದಾಪುರದಲ್ಲಿ 41ನೇ ವರ್ಷದ ಮಹಾಶಿವರಾತ್ರಿ ಉತ್ಸವ ಆಚರಣೆ


ಕುಂದಾಪುರ: ಇಲ್ಲಿನ ಪಡುಕೇರಿಯ ಶ್ರೀ ಆದಿಶಕ್ತಿ ಕಾಳೀ ಕ್ಷೇತ್ರ ದೇವಸ್ಥಾನದಲ್ಲಿ 41ನೇ ವರ್ಷದ ಮಹಾಶಿವರಾತ್ರಿ ಉತ್ಸವು ಮಾ.8 ರಂದು ನೆರವೇರಿತು. 

ಅಂದು ಬೆಳಿಗ್ಗೆ 9ಗಂಟೆಗೆ ಶ್ರೀ ದೇವಿಯ ಸನ್ನಿಧಿಯಲ್ಲಿ ಸಹಸ್ರ ಬಿಲ್ವಾರ್ಚನೆ, ಮಧ್ಯಾಹ್ನ 12.30ಕ್ಕೆ ಅಲಂಕಾರ ಪೂಜೆ, ಮಹಾ ಮಂಗಳಾರತಿ, ದೇವಿ ದರ್ಶನ ಮತ್ತು ತೀರ್ಥ-ಪ್ರಸಾದ ವಿತರಣೆ ಬಳಿಕ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಿತು.

ಸಂಜೆ 6 ರಿಂದ ರಾತ್ರಿ 9 ರ ತನಕ ಶ್ರೀ ಕ್ಷೇತ್ರದವರಿಂದ ಭಜನಾ ಕಾರ್ಯಕ್ರಮ, ನಂತರ ರಾತ್ರಿ ಪೂಜೆ, ದೇವಿ ದರ್ಶನ ಹಾಗೂ ಪ್ರಸಾದ ವಿತರಣೆ ನಡೆಯಿತು. 

ಈ ಸಂದರ್ಭದಲ್ಲಿ ಶ್ರೀ ಆದಿಶಕ್ತಿ ಕಾಳೀ ಕ್ಷೇತ್ರದ ಆಡಳಿತ ಮೊಕ್ತೇಸರರು ಮತ್ತು ಭಕ್ತಾದಿಗಳು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article