Kundapura: ಶ್ರೀ ಚಿಕ್ಕಮ್ಮದೇವಿ ಮಹಿಳಾ ಮಂಡಳಿಯ ದಶಮಾನೋತ್ಸವ ಸಂಭ್ರಮ
ಕುಂದಾಪುರ: ಇಲ್ಲಿನ ಒಂಭತ್ತು ದಂಡಿಗೆಯಲ್ಲಿರುವ ಶ್ರೀ ಚಿಕ್ಕಮ್ಮದೇವಿ ಮಹಿಳಾ ಮಂಡಳಿ ಪಡುಕೇರಿ-ಕುಂದಾಪುರ ಇದರ ದಶಮಾನೋತ್ಸವ ಸಂಭ್ರಮ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಈ ಪ್ರಯುಕ್ತ ಶ್ರೀ ಚಿಕ್ಕಮ್ಮದೇವಿ ದೇವಳದ ಸಾನಿಧ್ಯದಲ್ಲಿ ಬೆಳಿಗ್ಗೆ ದುರ್ಗಾ ಹೋಮ, ಮಧ್ಯಾಹ್ನ ಅನ್ನ ಸಂತರ್ಪಣೆ, ಸಂಜೆ ದಿನೇಶ್ ಸುವರ್ಣ ಅವರಿಂದ ಭಜನಾ ಕಾರ್ಯಕ್ರಮ ನಡೆಯಿತು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ನಾಗರಾಜ್ ಕಾಮಧೇನು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಪದ್ಮಲತಾ ಚಂದ್ರಶೇಖರ್, ಚೇತನಾ ಕಿರಣ್ ಕುಮಾರ್, ರೇಣುಕಾ ಪ್ರಸಾದ್ ಭಾಗವಹಿಸಿದ್ದರು. ಯುವ ಮಿತ್ರ ವೃಂದದ ಅಧ್ಯಕ್ಷ ನಾಗರಾಜ್ ಕೆಳಮನೆ, ಮಹಿಳಾ ಮಂಡಳಿಯ ಅಧ್ಯಕ್ಷೆ ಮಲ್ಲಿಕಾ ಬಾಬಣ್ಣ, ಗೌರವಾಧ್ಯಕ್ಷೆ ರಮಾ ಪ್ರಕಾಶ್, ಕಾರ್ಯದರ್ಶಿ ಸುಜಾತ ಅಶೋಕ್, ಖಜಾಂಚಿ ಸುಜಾತ ಜಯರಾಜ್ ಉಪಸ್ಥಿತರಿದ್ದರು.
ಕಳೆದ ಸಾಲಿನ ಹಿಂದಿನ ಒಂಭತ್ತು ಮಹಿಳಾ ಮಂಡಳಿಯ ಅಧ್ಯಕ್ಷರನ್ನು ವೇದಿಕೆಯಲ್ಲಿ ಗುರುತಿಸಲಾಯಿತು. ಸ್ಥರ್ಧಾ ವಿಜೇತರಿಗೆ ಅತಿಥಿಗಳಿಂದ ಬಹುಮಾನ ವಿತರಿಸಲಾಯಿತು.
ಶ್ವೇತಾ ವಿಶ್ವನಾಥ್ ಪ್ರಾರ್ಥಿಸಿ, ಮಲ್ಲಿಕಾ ಬಾಬಣ್ಣ ಸ್ವಾಗತಿಸಿದರು. ಸುಜಾತ ಅಶೋಕ್ ವಂದಿಸಿ, ಕಾರ್ಯಕ್ರಮವನ್ನು ರಶ್ಮಿರಾಜ್ ಕುಂದಾಪುರ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಂಧ್ಯಾ ಶೆಣೈ ಉಡುಪಿ ಇವರಿಂದ ನಗೆಹನಿ ಕಾರ್ಯಕ್ರಮ ನಡೆಯಿತು. ನಂತರ ಸ್ಥಳೀಯರಿಂದ ಭರತನಾಟ್ಯ, ಯಕ್ಷಗಾನ, ನೃತ್ಯ ಪ್ರದರ್ಶನ ನಡೆಯಿತು. ರಾತ್ರಿ 10 ಗಂಟೆಗೆ ಕಲಾ ಸ್ಫೂರ್ತಿ ಹವ್ಯಾಸಿ ನಾಟಕ ತಂಡದವರಿಂದ ‘ಮದಿ ಮನಿ’ ಎಂಬ ಹಾಸ್ಯಮಯ ನಾಟಕ ಪ್ರದರ್ಶನಗೊಂಡಿತು.


