Mangalore: ಅಂಪಾರು ನಿತ್ಯಾನಂದ ಶೆಟ್ಟಿಯವರಿಗೆ ಸನ್ಮಾನ

Mangalore: ಅಂಪಾರು ನಿತ್ಯಾನಂದ ಶೆಟ್ಟಿಯವರಿಗೆ ಸನ್ಮಾನ


ಕುಂದಾಪುರ: ಲಯನ್ಸ್ ಕ್ಲಬ್ ಕುಂದಾಪುರ ಕೋಸ್ಟಲ್‌ಗೆ ಲಯನ್ಸ್ ಜಿಲ್ಲೆ 317ಸಿ.ಯ ರಾಜ್ಯಪಾಲ ಡಾ. ನೇರಿ ಕರ್ನೆಲಿಯೋ ಅವರ ಅಧಿಕೃತ ಭೇಟಿ ಕಾರ್ಯಕ್ರಮ  ಫಿಲೋಮಿನಾ ಕಮರ್ಷಿಯಲ್ ಹಾಲ್ ವಡೇರಹೋಬಳಿಯಲ್ಲಿ ಫೆ.27 ರಂದು ಸಂಜೆ 7 ಗಂಟೆಗೆ ನಡೆಯಿತು. 

ಸಭಾ ಕಾರ್ಯಕ್ರಮದಲ್ಲಿ ಭಾವೈಕ್ಯ ಕಾರ್ಯಕ್ರಮದ ರೂವಾರಿ ಡಾ. ಅಂಪಾರು ನಿತ್ಯಾನಂದ ಶೆಟ್ಟಿ ಅವರನ್ನು ಜಿಲ್ಲಾ ಗವರ್ನರ್ ಸನ್ಮಾನಿಸಿ ಗೌರವಿಸಿದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಲಯನ್ಸ್ ಕ್ಲಬ್ ಕುಂದಾಪುರ ಕೋಸ್ಟಲ್‌ನ ಅಧ್ಯಕ್ಷ ವಸಂತರಾಜ್ ಶೆಟ್ಟಿ ಮಾತನಾಡಿ, ಭಾವೈಕ್ಯ ಬಂಟರ ಮಹಾಸಮಾಗಮ ಕಾರ್ಯಕ್ರಮ ಒಂದು ಮಾದರಿ ಕಾರ್ಯಕ್ರಮವಾಗಿ ಮಾಡಿ ತೋರಿಸುವಲ್ಲಿ ನಿತ್ಯಾನಂದ ಶೆಟ್ಟಿಯವರ ಪರಿಶ್ರಮ ಅಪಾರ. ಅವರು ಕಳೆದ ಒಂದುವರೆ ವರ್ಷದಿಂದ ನಡೆಸಿಕೊಂಡು ಬರುತ್ತಿರುವ ಸಮಾಜ ಸೇವೆ ಎಲ್ಲಾ ಸಂಘ-ಸಂಸ್ಥೆಗಳಿಗೂ ಮಾದರಿಯಾದದು. ಅವರ ನಿಸ್ವಾರ್ಥ ಸೇವಾ ಮನೋಭಾವ ಇನ್ನೂ ಹೀಗೆ ಮುಂದುವರೆಯಲಿ ಎಂದು ಶುಭ ಹಾರೈಸಿದರು. 

ಲಯನ್ಸ್ ಕ್ಲಬ್‌ನ ವಿಸ್ತರಣಾಧಿಕಾರಿ ಅರುಣ್ ಕುಮಾರ್ ಹೆಗ್ಡೆ, ಮಾಜಿ ಜಿಲ್ಲಾ ಗವರ್ನರ್ ಜಯಕರ ಶೆಟ್ಟಿ, ಪ್ರಥಮ ಮಹಿಳಾ ಗವರ್ನರ್ ಸ್ವಪ್ನ ಸುರೇಶ್, ಜಿಲ್ಲಾ ಸಂಪುಟ ಕಾರ್ಯದರ್ಶಿ ರವಿರಾಜ್ ನಾಯಕ್, ಪ್ರಾಂತೀಯ ಅಧ್ಯಕ್ಷ ದೀನಪಾಲ್ ಶೆಟ್ಟಿ, ವಲಯ್ಯಾಧ್ಯಕ್ಷ ಶಂಕರ್ ಶೆಟ್ಟಿ, ಪ್ರಾಂತೀಯ ಕಾರ್ಯದರ್ಶಿ ಮೋಹನದಾಸ್ ಶೆಟ್ಟಿ, ಸರಕು ಮತ್ತು ಸೇವಾ ತೆರಿಗೆ ಪರಿವೀಕ್ಷಕ ಪ್ರತಾಪ್ ಚಂದ್ರ ಶೆಟ್ಟಿ ಹಳ್ನಾಡು, ಕುಂದಾಪುರ ಕೋಸ್ಟಲ್‌ನ ಪ್ರಧಾನ ಕಾರ್ಯದರ್ಶಿ ಉದಯ್ ಕುಮಾರ್ ಶೆಟ್ಟಿ ಕೋಶಾಧಿಕಾರಿ ಸುಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. 

ನಿಮಿತಾ ಪಿ. ಶೆಟ್ಟಿ ಪ್ರಾರ್ಥಿಸಿ, ಅಧ್ಯಕ್ಷ ವಸಂತರಾಜ್ ಶೆಟ್ಟಿ ಸ್ವಾಗತಿಸಿದರು. ಶೈಲಜಾ ವಿ. ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article