Mangalore: ರಾಮಕ್ಷತ್ರಿಯ ಮಹಿಳಾ ವೃಂದದಿಂದ ಮಹಿಳಾ ದಿನಾಚರಣೆ
Saturday, March 16, 2024
ಮಂಗಳೂರು: ರಾಮಕ್ಷತ್ರಿಯ ಮಹಿಳಾ ವೃಂದ ಮಾರ್ಗನ್ಸ್‌ಗೇಟ್ ಮಂಗಳೂರು ಇವರ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ರಾಮಕ್ಷತ್ರಿಯ ಮಂದಿರದಲ್ಲಿ ಶುಭ ಪ್ರಶಾಂತ್ ನುಳ್ಳಿಪಾಡಿ ಅವರ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು
ಮುಖ್ಯ ಅತಿಥಿ ಡಾ. ಜಯಶ್ರೀ ಬೋಳಾರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಹಿಳೆಯರಿಗಾಗಿ ಆಯೋಜಿಸಲಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು. ಆರ್ಥಿಕವಾಗಿ ಹಿಂದುಳಿದ ರಾಜೀವಿ ಎಂಬ ಮಹಿಳೆಗೆ ಧನಸಹಾಯವನ್ನು ನೀಡಲಾಯಿತು.
ಇದೇ ಸಂದರ್ಭದಲ್ಲಿ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡಾ. ಮಂಜುಳಾ ಅನಿಲ್ ರಾವ್ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಮಾತು ಸಂಘದ ಅಧ್ಯಕ್ಷ ರಾಧಾಕೃಷ್ಣ ಅವರು ಮಹಿಳಾ ದಿನಾಚರಣೆಯ ಶುಭಾಶಯಗಳು ತಿಳಿಸಿ ಮಾತನಾಡಿದರು.
ಸುಜಾತ ಸುಧೀರ್ ಅವರು ಪ್ರಾರ್ಥಿಸಿದರು. ನಯನ ಪ್ರವೀಣ್ ವಂದಿಸಿ, ಕಲ್ಪನಾ ವೆಂಕಟೇಶ ಕಾರ್ಯಕ್ರಮವನ್ನು ನಿರೂಪಿಸಿದರು.

