Mangalore: ಶ್ರೀರಾಮನ ಸೇವೆ ಮಾಡಿದ್ದು ದೊಡ್ಡ ಸುಯೋಗ
ಮಂಗಳೂರು: ಶ್ರೀರಾಮನ ಸೇವೆ ಮಾಡಿದ್ದು ದೊಡ್ಡ ಸುಯೋಗ. ಕೃಷ್ಣೈಕ್ಯರಾದ ವಿಶ್ವೇಶ ತೀರ್ಥ ಸ್ವಾಮಿಜಿ ಅವರು ಈ ಭಾಗ್ಯ ನಮಗೆ ಕರುಣಿಸಿದ್ದಾರೆ ಎಂದು ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮಿಜಿ ಹೇಳಿದರು.
ಅವರು ಮಾ.17 ರಂದು ಶ್ರೀರಾಮ ದೇವರ ಪ್ರಾಣಪ್ರತಿಷ್ಠಾಪನೆ ಮತ್ತು 48 ದಿನಗಳ ಮಂಡಲೋತ್ಸವವನ್ನು ವೈಭವದಿಂದ ನೆರವೇರಿಸಿ ಮರಳಿದ ವಿಶ್ವಪ್ರಸನ್ನ ತೀರ್ಥ ಸ್ವಾಮಿಜಿ ಅವರನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಭವ್ಯವಾಗಿ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ್ ಕಾಮತ್ ಸೇರಿಂದತೆ ವಿಎಚ್‌ಪಿ ಮುಖಂಡರಿಂದ ಸ್ವಾಗತಿಸಿದರು. ಈ ಸಂದರ್ಭ ಮಾಧ್ಯಮದ ಜೊತೆ ಮಾತನಾಡಿದರು.
ಶ್ರೀರಾಮನ ನೆಲದಲ್ಲಿ ಮಾಡಿದ ಸೇವೆಯನ್ನು ನಾನು ಕೃಷ್ಣನಿಗೆ ಸಮರ್ಪಿಸುತ್ತೆನೆ. ಅಯೋಧ್ಯೆಯಲ್ಲಿ ಇದ್ದಾಗ ದೂರದ ಉತ್ತರ ಪ್ರದೇಶದಲ್ಲಿ ಇದ್ದೇವೆ ಅನಿಸಿಲ್ಲ. ಇದು ರಾಮನ ಸಾನಿದ್ಯ ಮತ್ತೊಂದು ರಾಮ ಭಕ್ತರ ಸಾನಿಧ್ಯ ಎಂದ ಅವರು ಕರ್ನಾಟಕದಿಂದ ದಕ್ಷಿಣ ಭಾರತದ ರಾಜ್ಯಗಳಿಂದ ನಿರಂತರವಾಗಿ ಭಕ್ತರು ಬಂದು ಶ್ರೀರಾಮನ ದರ್ಶನ ಪಡೆಯುತ್ತಿದ್ದಾರೆ. ದೇವಾಲಯ ಪೂರ್ಣಗೊಳ್ಳಲು ಇನ್ನು 2 ವರ್ಷ ಬೇಕಾಗಿದ್ದು, ಮೋದಿಜಿ ಅವರ ಕಾಲದಲ್ಲಿ ಇಂತಹ ಬೆಳವಣಿಗೆ ಕಾಣುತ್ತಿದ್ದೆವೆ. ಧಾರ್ಮಿಕವಾಗಿ, ಸಾಂಸ್ಕೃತಿಕವಾಗಿ ಆರ್ಥಿಕವಾಗಿ ಸಾಮಜಿಕವಾಗಿ ಎಲ್ಲಾ ನೆಲೆಯಲ್ಲಿ ಬದಲಾವಣೆ ಕಾಣುತ್ತಿದ್ದೇವೆ. ಇಂತಹ ಸರಕಾರ ಮತ್ತೇ ಪುನಃ ದೇಶದಲ್ಲಿ ಆಡಳಿತಕ್ಕೆ ಬರಬೇಕು ಎಂದು ಹೇಳಿದರು.