Mangalore: ದೇವ ವನ ಪಾರ್ಕ್ ಉದ್ಘಾಟನೆ

Mangalore: ದೇವ ವನ ಪಾರ್ಕ್ ಉದ್ಘಾಟನೆ


ಮಂಗಳೂರು: ಮಹಾನಗರ ಪಾಲಿಕೆ ವ್ಯಾಪ್ತಿಯ ಕದ್ರಿ ಉತ್ತರ ವಾರ್ಡ್ 32ರ ನಂತೂರಿನಲ್ಲಿ ನೂತನವಾಗಿ ನಿರ್ಮಾಣಗೊಂಡ ದೇವ ವನ ಪಾರ್ಕ್ ಶಾಸಕ ವೇದವ್ಯಾಸ ಕಾಮತ್ ಅವರ ಘನ ಉಪಸ್ಥಿತಿಯಲ್ಲಿ, ಶ್ರೀ ವಿಠಲ ಶೆಣೈ ಅವರಿಂದ ಉದ್ಘಾಟನೆಗೊಂಡಿತು.

ಉದ್ಘಾಟನೆಯ ಬಳಿಕ ಶಾಸಕರು ಮಾತನಾಡಿ, ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ 18 ಲಕ್ಷ ರೂ. ಅನುದಾನದಲ್ಲಿ ಈ ಪಾರ್ಕ್ ಅಭಿವೃದ್ಧಿಗೊಂಡಿದ್ದು ಸ್ಥಳೀಯ ಮ.ನ.ಪಾ. ಸದಸ್ಯೆ ಶಕೀಲ ಕಾವ ಅವರ ವಿಶೇಷ ಮುತುವರ್ಜಿಯಿಂದ ಶೀಘ್ರದಲ್ಲಿ ಕಾಮಗಾರಿ ಮುಗಿದು ಸಾರ್ವಜನಿಕ ಬಳಕೆಗೆ ಲಭ್ಯವಾಗಿದೆ. ಇನ್ನು ಮೇಲೆ ಇಲ್ಲಿನ ಸುಂದರ ಪರಿಸರವನ್ನು ಕಾಪಾಡಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರದ್ದು ಎಂದರು. 

ಮಂಡಲದ ಉಪಾಧ್ಯಕ್ಷೆ ಮಂಗಳ ಆಚಾರ್ಯ, ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಕಮಲಾಕ್ಷಿ, ಬೂತ್ ಕಾರ್ಯದರ್ಶಿ ಸಂತೋಷ್, ಬಸ್ತಿ ಪುರುಷೋತ್ತಮ ಶೆಣೈ, ಶ್ರೀಪಾದ ಶೆಣೈ, ಶಿವಪ್ಪ ನಂತೂರು, ರವೀಂದ್ರ ನಂತೂರು, ಸದಾನಂದ ಪ್ರಭು, ಕುಸುಮ ದೇವಾಡಿಗ, ಕೃಷ್ಣ ಭಟ್, ಗಣೇಶ್ ಮಲ್ಯ, ಸುಪ್ರೀತಾ, ಚೇತನಾ, ನಿರ್ಮಲ, ಆಶಾಲತಾ, ಬೇಬಿ, ಶಿಲ್ಪ, ಉಮ ಕಂಡೆಟ್ಟು, ಸಿಂಚನ, ಶಮಿನ, ವಿಜಯ ಶಣೈ, ಉಮಾ ಶೆಟ್ಟಿ, ನಿಶಿತ, ಯಶೋಧ, ಜ್ಯೋತಿ ನಂತೂರು, ಉಪೇಂದ್ರ ಕಂಡೆಟ್ಟು, ಯಮುನಾ, ಗುಣವತಿ, ಗೀತಾ, ಶೋಭ, ಉರ್ಮಿಳ, ಕೃಷ್ಣಮ್ಮ, ಗುಲಾಬಿ ಮತ್ತು ಅನೇಕ ಸ್ಥಳೀಯರು ಉಪಸ್ಥಿತರಿದ್ದರು.




Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article