Mangalore: ಕುಂಭಕರ್ಣ ದೃಶ್ಯ ರೂಪಕ ಪ್ರದರ್ಶನ ಉದ್ಘಾಟನೆ
Friday, March 8, 2024
ಮಂಗಳೂರು: ಮಹಾಶಿವರಾತ್ರಿ ಪವಿತ್ರ ಸರ್ವದ ಅಂಗವಾಗಿ ಮಂಗಳೂರಿನ ಪ್ರಜಾಪತಿ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯ ವತಿಯಿಂದ ಏರ್ಪಡಿಸಲಾಗಿದ್ದ ಕುಂಭಕರ್ಣ ದೃಶ್ಯ ರೂಪಕ ಸಹಸ್ರಲಿಂಗ ದರ್ಶನ ದೃಷ್ಟಿಚಕ್ರ ರಹಸ್ಯ ಮುಂದಾದ ವಿಶೇಷ ಆಕರ್ಷಣೆಗಳ ಪ್ರದರ್ಶನದ ಉದ್ಘಾಟನೆಯನ್ನು ಕೆಮಾರು ಸಂದಿಪಾನಿ ಶ್ರೀ ಕ್ಷೇತ್ರದ ಶ್ರೀ ಈಶವಿಧದಾಸ ಸ್ವಾಮೀಜಿ ಅವರು ನೆರವೇರಿಸಿದರು.
ಬಳಿಕ ಆಶಿರ್ವಚನ ನೀಡಿ, ಶಿವರಾಜ್ ಸ್ತ್ರೀಯ ಸಂದರ್ಭದಲ್ಲಿ ಮಾಡಿದ ಕುಂಭಕರ್ಣ ದೃಶ್ಯ ರೂಪವು, ವರ್ತಮಾನ ಸಮಯದಲ್ಲಿ ಅಜ್ಞಾನ ನಿದ್ರೆಯಲ್ಲಿರುವ ಮನಕ್ಷರನ್ನು ಜಾಗೃತಗೊಳಿಸಿ ಆಧ್ಯಾತ್ಮಿಕ ಜಾಗೃತಿ ಎಡೆಗೆ ಕೊಂಡೊಯ್ಯುವ ಉತ್ತಮ ಸಾಧನವಾಗಿದೆ ಎಂದು ಹೇಳಿದರು.
ಮುಖ್ಯ ಅತಿಥಿ ರವಿಶಂಕರ್ ಮಿಜರ್ ಮಾತನಾಡಿ, ಈ ಪ್ರದರ್ಶನದಲ್ಲಿರುವ ಸಹಸ್ರ ಶಿವಲಿಂಗ ದರ್ಶನ ಅತ್ಯಂತ ಆಕರ್ಷಣೆ ಹೊಂದಿದ್ದು, ಶಿವ ಭಕ್ತಿಯನ್ನು ಹೆಚ್ಚಿಸುತ್ತದೆ ಮಂಗಳೂರಿನ ಜನತೆ ಇದನ್ನು ವೀಕ್ಷಿಸಿ ಆಧ್ಯಾತ್ಮಿಕ ಆನಂದವನ್ನು ಪಡೆಯಬೇಕೆಂದು ವಿನಂತಿಸಿದರು.
ಇನ್ನೋರ್ವ ಅತಿಥಿ ಪತ್ರಕರ್ತ ಹಾಗೂ ರಂಗಕರ್ಮಿ ಪರಮಾನಂದ ಸಾಲಿಯನ್ ಮಾತನಾಡಿ, ಈಶ್ವರಿಯ ವಿಶ್ವವಿದ್ಯಾನಿಲಯವು ರಾಜಯೋಗ ಅಭ್ಯಾಸದ ಮೂಲಕ ಜನರ ಮನಸ್ಥಿತಿಗೆ ಶಾಂತಿ ಅಮೂಲ್ಯ ಕೊಡುಗೆಯನ್ನು ನೀಡುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿ.ಕೆ. ವಿಶ್ವೇಶ್ವರಿ ಉಪಸ್ಥಿತರಿದ್ದರು.

