Moodubidire: ಕಲ್ಲಬೆಟ್ಟುನಲ್ಲಿ ಪೋಲಿಯೊ ಲಸಿಕಾ ಅಭಿಯಾನ
Sunday, March 3, 2024
ಮೂಡುಬಿದಿರೆ: ಕಲ್ಲಬೆಟ್ಟು ಶಾಲೆಯಲ್ಲಿ ವಾಡ್೯ ಸದಸ್ಯ ಜೊಸ್ಸಿ ಮಿನೇಜಸ್ ಅವರು ಮಗುವಿಗೆ ಲಸಿಕೆ ಹಾಕುವ ಮೂಲಕ ಪಲ್ಸ್ ಪೋಲಿಯೊ ಲಸಿಕಾ ಅಭಿಯಾನಕ್ಕೆ ಚಾಲನೆಯನ್ನು ನೀಡಿದರು. ಕಲ್ಲಬೆಟ್ಟು ಸಮುದಾಯ ಆರೋಗ್ಯ ಅಧಿಕಾರಿ ಸೋಮನಾಥ, ಅಂಗನವಾಡಿ ಕಾರ್ಯಕರ್ತೆಯರಾದ ರೇಖಾ, ಶಕುಂತಳಾ, ನಿವೃತ್ತ ಕಿರಿಯ ಆರೋಗ್ಯ ಸಹಾಯಕಿ ಗಿರಿಜಾ ಹಾಗೂ ಸ್ತ್ರೀ ಶಕ್ತಿ ಸದಸ್ಯೆ ಪ್ರೀತಿ ಉಪಸ್ಥಿತರಿದ್ದರು.