Moodubidire: ಕಾರ್ಮೆಲ್ ಶಾಲೆ: ವಿಜ್ಞಾನ ಮತ್ತು ಗಣಿತ ಮಾದರಿ ಪ್ರದರ್ಶನ

Moodubidire: ಕಾರ್ಮೆಲ್ ಶಾಲೆ: ವಿಜ್ಞಾನ ಮತ್ತು ಗಣಿತ ಮಾದರಿ ಪ್ರದರ್ಶನ


ಮೂಡುಬಿದಿರೆ: ಇಲ್ಲಿನ  ಕಾರ್ಮೆಲ್ ಶಾಲೆಯಲ್ಲಿ ವಿಜ್ಞಾನ ಮತ್ತು ಗಣಿತ ವಿಷಯಗಳ ಕುರಿತ ಮಾದರಿ ಪ್ರದರ್ಶನ ಮಂಗಳವಾರ ನಡೆಯಿತು.

ಒಂದನೇ ತರಗತಿಯಿಂದ ಎಂಟನೇ ತರಗತಿಯವರೆಗೆ ಬೇರೆ ಬೇರೆ ರೀತಿಯ ಪ್ರದರ್ಶನ ನಡೆದಿದ್ದು, ಮಕ್ಕಳು ಬಹಳ ಚಟುವಟಿಕೆಯಿಂದ ತಮ್ಮ ಸಾಧನೆಯನ್ನು ತೋರಿಸಿದ್ದರು. ಪ್ರದರ್ಶನವನ್ನು ನೋಡಲು ಕಾರ್ಮೆಲ್ ಶಾಲೆಯ ಹೆತ್ತವರು ಮಾತ್ರವಲ್ಲದೆ ರೋಟರಿ ಶಾಲೆಯ ಮಕ್ಕಳು, ಹೋಲಿ ರೋಜರಿ ಪ್ರೌಢಶಾಲೆ ಮತ್ತು ಹೈಸ್ಕೂಲಿನ ಮಕ್ಕಳು ಭಾಗವಹಿಸಿದ್ದರು. ಮಾತ್ರವಲ್ಲದೆ ರೋಟರಿ ಶಾಲೆಯ ಮಕ್ಕಳು ಸಹ ಭಾಗವಹಿಸಿದ್ದರು.

ಮುಖ್ಯ ಅತಿಥಿಯಾಗಿ ಪುರಸಭೆಯ ಸದಸ್ಯ ಸುರೇಶ್ ಪ್ರಭು, ಹೋಲಿ ರೋಜರಿ ಶಾಲೆಯ ಪ್ರಾಂಶುಪಾಲೆ ರಮಾ ಮತ್ತು ಧರ್ಮ ಭಗಿನಿ ಕಾರ್ಮೆಲ್ ರೀಟಾ ಅವರು ಉಪಸ್ಥಿತರಿದ್ದರು.

 ಶಾಲಾ ಮುಖ್ಯಸ್ಥೆ ಭಗಿನಿ ಗ್ರೆಸಿಲ್ಲ ಎಸಿ ಅವರು ಸ್ವಾಗತಿಸಿದರು. 

ಒಂದನೇ ತರಗತಿಯಿಂದ ಎಂಟನೇ ತರಗತಿವರೆಗಿನ ಮಕ್ಕಳು ಸಸ್ಯ ಸಂಪತ್ತು ಮತ್ತು ಪ್ರಾಣಿ ಸಂಕುಲ, ಜಾಗತಿಕ ತಾಪಮಾನ, ಒಂಟೆ,ಪವಾಡ ವಿಜ್ಞಾನ ಮತ್ತು ಗಣಿತ, ಕೃತಕ ಬುದ್ಧಿಮತ್ತೆ, ಸಿರಿಧಾನ್ಯ, ಕಲೆ ಮತ್ತು ಚಿತ್ರಕಲೆ ಮುಂತಾದುವುಗಳನ್ನು ಪ್ರದರ್ಶಿಸಿದ್ದರು.








Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article