Moodubidire: ರಾಷ್ಟ್ರಮಟ್ಟದ ಬಿ.ಎ.ಆರ್.ಸಿ.ಹೆಚ್. ಹಾಗೂ ಬಿ ಪ್ಲಾನಿಂಗ್ ಪರೀಕ್ಷೆಯಲ್ಲಿ ಉತ್ತಮ ಸಾಧನೆ
Thursday, March 7, 2024
ಮೂಡುಬಿದಿರೆ: ಇತ್ತೀಚೆಗೆ ಎನ್.ಟಿ.ಎ. ಅವರು ನಡೆಸಿದ ರಾಷ್ಟ್ರ ಮಟ್ಟದ ಬಿ.ಎ.ಆರ್.ಸಿ.ಹೆಚ್. ಹಾಗೂ ಬಿ ಪ್ಲಾನಿಂಗ್ ಪರೀಕ್ಷೆಯಲ್ಲಿ ಕಲ್ಲಬೆಟ್ಟು ಎಕ್ಸಲೆಂಟ್ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜಿನ ನಿಶಾಂತ. ಪಿ. ಹೆಗಡೆ ಅವರು ಕ್ರಮವಾಗಿ 92.301758, 98.9708956 ಪರ್ಸೆಂಟೈಲ್ ನ್ನು ಪಡೆದಿದ್ದಾರೆ.
ಇವರು ಡಾ. ಪ್ರಶಾಂತ್ ಆರ್. ಹೆಗಡೆ ಹಾಗೂ ಕೋಕಿಲ ಹೆಗಡೆ ಅವರ ಪುತ್ರ.
ಈ ಹಿಂದೆ ನಡೆದ ಜೆಇಇ ಮೈನ್ಸ್ ಅರ್ಹತಾ ಪರೀಕ್ಷೆಯಲ್ಲಿಯೂ 99.32 ಪರ್ಸೆಂಟೈಲ್‌ನ್ನು ಪಡೆದಿರುವುದಕ್ಕಾಗಿ ಸಂಸ್ಥೆಯ ಅಧ್ಯಕ್ಷ ಯುವರಾಜ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್ ಹಾಗೂ ಪ್ರಾಂಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ ಅವರು ಅಭಿನಂದಿಸಿದ್ದಾರೆ.