Newdheli: ಕಾಂಗ್ರೆಸ್ ನ 2ನೇ ಪಟ್ಟಿ ಪ್ರಕಟ
Thursday, March 21, 2024
ನವದೇಹಲಿ: 2024ನೇ ಲೋಕಸಭಾ ಚುನವಣೆ ಹಿನ್ನಲೆಯಲ್ಲಿ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ 2ನೇ ಪಟ್ಟಿಯನ್ನು ಇಂದು ಪ್ರಕಟಗೊಳಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಗೆ ಪದ್ಮರಾಜ್ ಆರ್., ಉಡುಪಿ-ಚಿಕ್ಕಮಗಳೂರಿಗೆ ಡಾ. ಜಯಪ್ರಕಾಶ್ ಹೆಗ್ಡೆ, ಮೈಸೂರಿಗೆ ಎಂ. ಲಕ್ಷ್ಮಣ್, ಉತ್ತರ ಕನ್ನಡಕ್ಕೆ ಡಾ. ಅಂಜಲಿ ನಿಂಬಾಳ್ಕರ್, ಚಿಕ್ಕೋಡಿಗೆ ಪ್ರಿಯಾಂಕಾ ಜಾರಕಿಹೊಳಿ, ಬೆಳಗಾಂಗೆ ಮೈಲಾಲ್ ರವೀಂದ್ರ ಹೆಬ್ಬಾಳ್ಕರ್, ಬಾಗಲಕೋಟೆಗೆ ಸಂಯುಕ್ತ ಎಸ್. ಪಾಟೀಲ್, ಗುಲ್ಬರ್ಗಕ್ಕೆ ರಾಮಕೃಷ್ಣ, ರಾಯಚೂರಿಗೆ ಜಿ. ಕುಮಾರ್ ನಾಯ್ಕ್, ಬೀದರ್ ಗೆ ಸಾಗರ್ ಖಂಡ್ರೆ, ಕೊಪ್ಪಳಕ್ಕೆ ಕೆ. ರಾಜಶೇಖರ್ ಬಸವರಾಜ ಹಿಟ್ನಾಳ್, ಧಾರವಾಡಕ್ಕೆ ವಿನೋದ್ ಅಸೋಟಿ, ದಾವಣಗೆರೆಗೆ ಪ್ರಭಾ ಮಲ್ಲಿಕಾರ್ಜುನ್, ಚಿತ್ರದುರ್ಗಕ್ಕೆ ಬಿ.ಎನ್. ಚಂದ್ರಪ್ಪ, ಬೆಂಗಳೂರು ಉತ್ತರ ಪ್ರೊ. ಎಂ.ವಿ. ರಾಜೀವ್ ಗೌಡ, ಬೆಂಗಳೂರು ದಕ್ಷಿಣಕ್ಕೆ ಸೌಮ್ಯ ರೆಡ್ಡಿ, ಬೆಂಗಳೂರು ಕೇಂದ್ರಕ್ಕೆ ಮನ್ಸೂರ್ ಅಲಿಖಾನ್ ಅವರುಗಳನ್ನು ಅಭ್ಯರ್ಥಿಗಳೆಂದು ಘೋಷಿಸಲಾಗಿದೆ.