Putturu: ಅಂಗನವಾಡಿಗೆ ನುಗ್ಗಿ ಮೊಟ್ಟೆಗಳಿಂದ ಆಮ್ಲೆಟ್ ತಯಾರಿಸಿದ ತಿಂದ ಕಳ್ಳರು..!
Tuesday, March 19, 2024
ಪುತ್ತೂರು: ಅಂಗನವಾಡಿಯೊಂದಕ್ಕೆ ನುಗ್ಗಿದ ಕಳ್ಳರು ಅಲ್ಲಿ ಮೊಟ್ಟೆಗಳಿಂದ ಆಮ್ಲೆಟ್ ತಯಾರಿಸಿ ತಿಂದು ಪಾತ್ರೆಗಳನ್ನು ಕಳವು ಮಾಡಿದ ಘಟನೆ ಪುತ್ತೂರಿನ ನೆಲ್ಲಿಕಟ್ಟೆ ಅಂಗನವಾಡಿಯಲ್ಲಿ ನಡೆದಿದೆ. ಪುತ್ತೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿಯಲ್ಲಿರುವ ನೆಲ್ಲಿಕಟ್ಟೆ ಅಂಗನವಾಡಿಗೆ ನುಗ್ಗಿದ ಕಳ್ಳರು ಅಲ್ಲಿ ಮಕ್ಕಳಿಗೆ ನೀಡಲು ದಾಸ್ತಾನು ಇರಿಸಿದ್ದ ಸುಮಾರು 25ಕ್ಕೂ ಹೆಚ್ಚು ಮೊಟ್ಟೆಗಳನ್ನು ಆಮ್ಲೆಟ್ ಮಾಡಿ ತಿಂದು ತೇಗಿದ್ದಲ್ಲದೆ ಅಂಗನವಾಡಿಯ ಪಾತ್ರೆಗಳನ್ನೂ ಕಳವು ಮಾಡಿದ್ದಾರೆ. ಅಂಗನವಾಡಿಯ ಟಾಯ್ಲೆಟ್ ಬೇಸಿನ್‌ಗೆ ಮಣ್ಣು ತುಂಬಿಸಿ ವಿಕೃತಿ ಮೆರೆದಿದ್ದಾರೆ.
ನಂತರ ಪಕ್ಕದ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಶಿಕ್ಷಣ ಇಲಾಖೆಯ ಬಿಆರ್‌ಸಿ ಕೇಂದ್ರದ ಬಾಗಿಲಿನ ಬೀಗ ಮುರಿದು ಅಲ್ಲಿದ್ದ ಚಿಲ್ಲರೆ ಹಣವನ್ನು ಕಳವು ಮಾಡಿದ್ದಾರೆ. ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಘಟನಾ ಸ್ಥಳಕ್ಕೆ ನಗರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.