Santhekatte: ಕಕ್ಕುಂಜೆ ಶ್ರೀ ಕಟ್ಟೆ ಮಹಾದೇವಿ ಅಮ್ಮನವರ ದೇವಸ್ಥಾನಕ್ಕೆ   ಹೊರೆ ಕಾಣಿಕೆ ಸಮರ್ಪಣೆ

Santhekatte: ಕಕ್ಕುಂಜೆ ಶ್ರೀ ಕಟ್ಟೆ ಮಹಾದೇವಿ ಅಮ್ಮನವರ ದೇವಸ್ಥಾನಕ್ಕೆ ಹೊರೆ ಕಾಣಿಕೆ ಸಮರ್ಪಣೆ


ಸಂತೆಕಟ್ಟೆ: ಇಲ್ಲಿನ ಸಂತೆಕಟ್ಟೆಯ ಶಿವಳ್ಳಿ ಗ್ರಾಮದ ಕಕ್ಕುಂಜೆ ಶ್ರೀ ಕಟ್ಟೆ ಮಹಾದೇವಿ ಅಮ್ಮನವರ ದೇವಸ್ಥಾನ ಹಾಗೂ ಕುಕ್ಕಿಕಟ್ಟೆ ಕುದ್ರುಚಾವಡಿ ಪಂಚಧೂಮಾವತಿ ಗಡುವಾಡು ದೈವಸ್ಥಾನದ ನವೀಕೃತ ತಾಮ್ರಮಯ ಆಲಯ ಸಮರ್ಪಣೆ ಪ್ರಯುಕ್ತ ‘ಪುನಃ ಪ್ರತಿಷ್ಠೆ’ ‘ಬ್ರಹ್ಮಕಲಶೋತ್ಸವ’ ಮತ್ತು ‘ವಾರ್ಷಿಕ ನೇಮೋತ್ಸವ’ದ ಪ್ರಯುಕ್ತ ಹೊರೆ ಕಾಣಿಕೆ ಸಮರ್ಪಣೆ ಕಾರ್ಯಕ್ರಮವು ಮಾ.25 ರಂದು ಸಂಜೆ ನಡೆಯಿತು.

ಸಂಜೆ 4.30ಕ್ಕೆ ಹೊರೆಕಾಣಿಕೆ ಸಮರ್ಪಣೆ ಮೆರವಣಿಗೆಯು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಿಂದ ಹೊರಟು ಬಬ್ಬುಸ್ಥಾನ, ಗರಡಿ, ಕೊರಗಜ್ಜ ಮಾರ್ಗವಾಗಿ ಚಿಕ್ಕಮ್ಮ ದೇವಸ್ಥಾನ, ಕುದ್ರುಚಾವಡಿ, ಬೊಮ್ಮರ್ಯ ಮಾರ್ಗವಾಗಿ ನಯಂಪಳ್ಳಿ, ಎಲ್.ವಿ.ಟಿ. ದೇವಸ್ಥಾನ, ಅಂಬಾಗಿಲು, ವ್ಯಾಯಾಮ ಶಾಲೆ ಮಾರ್ಗವಾಗಿ ಮಣಿಪಾಲ ರಸ್ತೆ, ಶ್ಯಾಂ ಸರ್ಕಲ್‌ನಿಂದ ಕಟ್ಟೆ ಶ್ರೀ ಮಹಾದೇವಿ ಅಮ್ಮನವರ ಸಾನಿಧ್ಯಕ್ಕೆ ತಲುಪಿತು.

ವಿಶೇಷ ಚೆಂಡೆ ವಾದನ, ಭಜನಾ ಮಂಡಳಿ ಅವರಿಂದ ಕುಣಿತ ಭಜನೆ, ಮಹಿಳೆಯರಿಂದ ಪೂರ್ಣ ಕುಂಭ ಕಲಶ ಸ್ವಾಗತ, ವಿಶೇಷ ವೇಷ ಭೂಷಣದ ಟ್ಯಾಬ್ಲೋ, ಹುಲಿ ವೇಷ ಕುಣಿತ, ಮಹಿಳೆಯರ ನವ ದುರ್ಗೆಯರ ಅಲಂಕಾರ, ಹೊರೆ ಕಾಣಿಕೆಯ ಮೆರಗನ್ನು ಹೆಚ್ಚಿಸಿತು.

ದೇವಳದ ಆಡಳಿತ ಮಂಡಳಿಯ ಮೊಕ್ತೇಸರರು, ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರು, ಉತ್ಸವ ಸಮಿತಿಯ ಅಧ್ಯಕ್ಷರು, ಊರಿನ ಗುರಿಕಾರರು, ಸದಸ್ಯರು, ಅರ್ಚಕ ವೃಂದದವರು ಮತ್ತು ಊರ-ಪರವೂರ ಭಕ್ತಾದಿಗಳು ಉಪಸ್ಥಿತರಿದ್ದರು.











Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article