Bantwal: ಬಂಟ್ವಾಳದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಿಂದ ಬಿರುಸಿನ ಪ್ರಚಾರ
ಬಂಟ್ವಾಳ: ದ.ಕ.ಜಿಲ್ಲಾ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಅವರು ಸೋಮವಾರ ಬಂಟ್ವಾಳ ವಿಧಾನಸಭಾ ಕ್ಷೇತ್ರದ ವಿವಿಧ ಭಾಗಗಳಲ್ಲಿ ಮಧ್ಯಾಹ್ನದ ಬಳಿಕ ಬಿರುಸಿನ ಮತಯಾಚನೆಗೈದರು.
ತಾಲೂಕಿನ ಬಡಗಕಜೆಕಾರು-ಪಾಂಡವರಕಲ್ಲು, ಉಳಿ-ಕಕ್ಕೇಪದವು, ಮಣಿನಾಲ್ಕೂರು-ಮಾವಿನ ಕಟ್ಟೆ, ಸರಪಾಡಿ-ಅಲ್ಲಿಪಾದೆ, ನಾವೂರ-ನಾವುರ, ಅಮ್ಟಾಡಿ, ಅರಳ-ಮೂಲರಪಟ್ಟ, ಕರ್ಪೆ, ಸಂಗಬೆಟ್ಟು-ಸಿದ್ಧಕಟ್ಟೆ, ರಾಯಿ ಜಂಕ್ಷನ್ ಪಂಜಿಕಲ್ಲು-ಆಚಾರಿಪಲ್ಕೆ, ಕುಕ್ಕಿಪಾಡಿ-ಮಾವಿನಕಟ್ಟೆ, ಚೆನ್ನೈತ್ತೋಡಿ-ಬಸ್ತಿಕೋಡಿ, ಇರ್ವತ್ತೂರು-ಇರ್ವತ್ತೂರು, ಪಿಲಾತಬೆಟ್ಟು-ಪುಂಜಾಲಕಟ್ಟೆ, ಕಾವಳಮೂಡುರು, ಕಾವಳಪಡೂರು ಗ್ರಾಮಗಳಲ್ಲಿ ಮತಭೇಟೆ ನಡೆಸಿದರು.
ಮಾಜಿ ಸಚಿವ ಬಿ. ರಮಾನಾಥ ರೈ, ಬ್ಲಾಕ್ ಅಧ್ಯಕ್ಷರಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಪ್ರಚಾರ ಸಮಿತಿ ಅಧ್ಯಕ್ಷ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಜಿಲ್ಲಾ ಪ್ರಚಾರ ಸಮಿತಿಯ ಪಿಯೂಷ್ ರೋಡ್ರಿಗಸ್, ಸುದರ್ಶನ್ ಜೈನ್, ಬಂಟ್ವಾಳ ಬ್ಲಾಕ್ ಪ್ರಚಾರ ಸಮಿತಿಯ ಜಗದೀಶ್ ಕೊಯಿಲ, ಮಾಯಿಲಪ್ಪ ಸಾಲ್ಯಾನ್, ಕೈಲಾರ್ ಇಬ್ರಾಹಿಂ, ಯೂತ್ ಕಾಂಗ್ರೆಸ್ ಅಧ್ಯಕ್ಷರಾದ ಸುರೇಶ್ ಜೋರಾ, ಇಬ್ರಾಹಿಂ ನವಾಜ್, ಮಧುಸೂಧನ್ ಶೆಣೈ, ಸಂಜೀವ ಗೌಡ, ಚೆನ್ನಪ್ಪ ಸಾಲ್ಯಾನ್, ಅಬ್ದುಲ್ ರಹಿಮಾನ್, ಪರಮೇಶ್ವರ್ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.