
Bantwal: ವಾಮದಪದವು ಸರಕಾರಿ ಕಾಲೇಜಿನಲ್ಲಿ ವಿಚಾರ ಸಂಕಿರಣ
ಬಂಟ್ವಾಳ: ವಾಮದಪದವು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಆಶ್ರಯದಲ್ಲಿ ಕಾಲೇಜಿನ ಸಮಾಜಕಾರ್ಯ ವಿಭಾಗ, ನ್ಯಾಶನಲ್ ಕೆಡೆಟ್‌ಕೋರ್ ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ ಸಮಾಜಕಾರ್ಯ ವಿಭಾಗದ ಸಹಯೋಗದಲ್ಲಿ ‘ಹ್ಯೂಮನ್ ಟ್ರಾಫಿಕ್ಕಿಂಗ್ ಥ್ರೆಟ್ ಟು ಮೊಡರ್ನ್ ಸೊಸೈಟಿ’ ಎನ್ನುವ ವಿಷಯದ ಮೇಲೆ ವಿಚಾರ ಸಂಕಿರಣವು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ವಿಚಾರ ಸಂಕಿರಣದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ‘ಆಂಟಿ ಹ್ಯೂಮನ್ ಟ್ರಾಫಿಕ್ಕಿಂಗ್ ಸೆಲ್’ ಮುಖ್ಯಸ್ಥ, ಸಮಾಜಕಾರ್ಯಪ್ರಾದ್ಯಾಪಕ ಡಾ. ಪೌಲ್ ಜೆರಾಲ್ಡ್ ಅವರು ಜಾಗತಿಕ ಮಟ್ಟದಲ್ಲಿ ಬದಲಾಗುತ್ತಿರುವ ಮಾನವ ಕಳ್ಳಸಾಗಣೆಯ ವಿದ್ಯಮಾನದ ಜೊತೆಗೆ ಇಂದಿನ ಭಾರತೀಯ ಸಮಾಜ ಎದುರಿಸುತ್ತಿರುವ ಸವಾಲುಗಳು ಹಾಗೂ ಈ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ವಿಚಾರ ಮಂಡಿಸಿದರು.
ಮಂಗಳೂರು ವಿಶ್ವವಿದ್ಯಾನಿಲಯದ ಸಮಾಜಕಾರ್ಯ ವಿಭಾಗದ ಸಹಾಯಕ ಪ್ರಾದ್ಯಾಪಕಿ ಡಾ. ಯಶಸ್ವಿನಿ ಬಟ್ಟಂಗಾಯ ಮಾತನಾಡಿ, ಬ್ರೇಕಿಂಗ್‌ದಗ್ಲಾಸ್ ಸೀಲಿಂಗ್: ಚಾಲೆಂಜಸ್ ಫೇಸಡ್ ಬೈ ವಿಮೆನ್’ ಎನ್ನುವ ವಿಷಯದ ಕುರಿತು ಮಾತನಾಡಿ, ಮಾನವ ಕಳ್ಳಸಾಗಣೆಯ ವಿರುದ್ಧ ಮಹಿಳೆಯರ ರಕ್ಷಣೆಯಲ್ಲಿ ಕಣ್ಣಿಗೆ ಕಾಣದ ವಿದ್ಯಮಾನಗಳು ಹೇಗೆ ತೊಡಕಾಗುತ್ತಿವೆ ಎಂಬುದನ್ನು ವಿವರಿಸಿದರು.
ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊ. ಕೃಷ್ಣಮೂರ್ತಿ ಎನ್.ಬಿ. ಕಾರ್ಯಕ್ರಮದ ಅಧ್ಯಕ್ಷತೆ ವಹಿದ್ದರು. ಸಮಾಜಕಾರ್ಯ ವಿಭಾಗದ ಸಹಾಯಕ ಪ್ರಾದ್ಯಾಪಕ ಪ್ರೊ. ಚಂದ್ರ ಎಸ್. ಸ್ವಾಗತಿಸಿದರು. ವಿದ್ಯಾರ್ಥಿ ಸಂಚಾಲಕ ರೂಪೇಶ್ ವಂದಿಸಿ, ವಿದ್ಯಾರ್ಥಿನಿ ರೂಪಾಲಿ ಕಾರ್ಯಕ್ರಮ ನಿರೂಪಿಸಿದರು.