Kasaragod: ಬಸ್ಸಿನಲ್ಲಿ ಸಾಗಾಟ ಮಾಡುತ್ತಿದ್ದ ಗಾಂಜಾ ವಶ
Tuesday, May 28, 2024
ಕಾಸರಗೋಡು: ಬಸ್ಸಿನಲ್ಲಿ ಸಾಗಾಟ ಮಾಡುತ್ತಿದ್ದ ಸುಮಾರು ಐದೂವರೆ ಕಿಲೋ ಗಾಂಜಾವನ್ನು ಅಬಕಾರಿ ಅಧಿಕಾರಿಗಳು ಮಂಜೇಶ್ವರದಿಂದ ವಶಪಡಿಸಿಕೊಂಡಿದ್ದಾರೆ.
ಅಬಕಾರಿ ಅಧಿಕಾರಿಗಳಿಗೆ ಲಭಿಸಿದ ಖಚಿತ ಮಾಹಿತಿಯಂತೆ ಸೋಮವಾರ ಬೆಳಗ್ಗೆ ಮಂಜೇಶ್ವರದ ಹೊಸಂಗಡಿಯಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಕಾಸರಗೋಡಿಗೆ ಬರುತ್ತಿದ್ದ ಕೇರಳ ಕೆಎಸ್‌ಆರ್‌ಟಿಸಿ ಬಸ್‌ನ್ನು ತಪಾಸಣೆ ನಡೆಸಿ ದಾಗ ಬ್ಯಾಗ್‌ನಲ್ಲಿ ಬಚ್ಚಿಟ್ಟು ಸಾಗಾಟ ಮಾಡುತ್ತಿದ್ದ ಗಾಂಜಾ ಪತ್ತೆಯಾಗಿದೆ.
ಈ ನಡುವೆ ಬ್ಯಾಗ್‌ನ ವಾರಸುದಾರನೆನ್ನಲಾದ ವ್ಯಕ್ತಿಯೋರ್ವ ತಪಾಸಣೆ ವೇಳೆ ಬಸ್ಸಿನಿಂದ ಇಳಿದು ಪರಾರಿಯಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.