Kundapura: ಮೇ.31: ಶ್ರೀ ಉರ್ಮಾರಿ ದೇವಳದ ವರ್ಧಂತ್ಯುತ್ಸವ
Wednesday, May 29, 2024
ಕುಂದಾಪುರ: ಇಲ್ಲಿನ ಖಾರ್ವಿ ಕೆಳಕೇರಿಯ ಡಾಗ್ ಫೆರಿ ರಸ್ತೆಯ ಸಮೀಪದಲ್ಲಿರುವ ಶ್ರೀ ಉರ್ಮಾರಿ ದೇವಸ್ಥಾನದ 13ನೇ ವರ್ಷದ ವಾರ್ಷಿಕ ವರ್ಧಂತಿ ಮಹೋತ್ಸವ ಮೇ. 31ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ.
ಅಂದು ಬೆಳಿಗ್ಗೆ 8 ಗಂಟೆಗೆ ಸಾಮೂಹಿಕ ಪ್ರಾರ್ಥನೆ, ಗಣಪತಿ ಪೂಜೆ, ಕಲಶ ಸ್ಥಾಪನೆ, ಕಲಾಭಿವೃದ್ಧಿ ಹೋಮ, ಕಲಾತತ್ವ ಹೋಮ, ಕಲಶಾಧಿವಾಸ ಹೋಮ, ಕಲಶಾಭಿಷೇಕ, ಅಲಂಕಾರ ಪೂಜೆ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಮಂಗಳಾರತಿ, ತೀರ್ಥ ಪ್ರಸಾದ ವಿತರಣೆ, ಬಳಿಕ ಸೇವಾಕರ್ತರಿಂದ ಸಾರ್ವಜನಿಕ ಮಹಾ ‘ಅನ್ನ ಸಂತರ್ಪಣೆ’ ಕಾರ್ಯಕ್ರಮ ನಡೆಯಲಿದೆ.
ಸಂಜೆ 6.30 ರಿಂದ ಸ್ಥಳೀಯ ಭಜನಾ ಮಂಡಳಿ ಅವರಿಂದ ಭಜನಾ ಕಾರ್ಯಕ್ರಮ ಹಾಗೂ ರಾತ್ರಿ 8 ಗಂಟೆಗೆ ರಾತ್ರಿ ಪೂಜೆ, ಮಂಗಳಾರತಿ ಹಾಗೂ ಪ್ರಸಾದ ವಿತರಣೆ ನಡೆಯಲಿದೆ ಎಂದು ದೇವಳದ ಪ್ರಕಟಣೆ ತಿಳಿಸಿದೆ.