Mangalore: ಶಾಸ್ತಾ ನ್ಯಾಕ್ ವಿ. ದಿ ರಿಜನರೋನ್ ಐಎಸ್‌ಇಎಫ್ ಇಂಟರ್ ನ್ಯಾಶನಲ್ ಸೈನ್ಸ್ ಫೇರ್-2024ನಲ್ಲಿ ಭಾರತದ ಪ್ರತಿನಿಧಿಯಾಗಿ ಭಾಗಿ
ಮಂಗಳೂರು: ಶಕ್ತಿ ನಗರದ ಶಕ್ತಿ ವಸತಿ ಶಾಲೆಯ 7ನೇ ತರಗತಿಯ ವಿದ್ಯಾರ್ಥಿ ಶಾಸ್ತಾ ನಾಕ್ ವರ್ಕಾಡಿ ಇವರು ಮೇ.10 ರಿಂದ 19 ರವರೆಗೆ ಅಮೇರಿಕಾದ ಕ್ಯಾಲಿಫೋರ್ನಿಯಾದ ಲಾಸ್ ಎಂಜಿಲಸ್‌ನಲ್ಲಿ ನಡೆದ ‘ದಿ ರಿಜನರೋನ್ ISEF ಇಂಟರನ್ಯಾಶನಲ್ ಸೈನ್ಸ್ ಫೇರ್-2024ರಲ್ಲಿ ಭಾಗವಹಿಸಿದ್ದಾರೆ.
ಇವರು ಸ್ಮಾರ್ಟ್ ಕೊಪ್ರಾ ಡ್ರ್ವೆಯರ್ ವಿಜ್ಞಾನ ಮಾದರಿ ‘“ENERGY: SUSTAINABLE MATERIAL & DESIGN" using advanced technological approach” ಎಂಬ ಮಾದರಿಯನ್ನು ಸಿದ್ದಪಡಿಸಿರುತ್ತಾರೆ. ಈ ವಿಜ್ಞಾನ ಮೇಳದಲ್ಲಿ ಭಾರತದಿಂದ ಒಟ್ಟು 20 ಮಂದಿ ಭಾಗವಹಿಸಿರುತ್ತಾರೆ. 10 IRIS ಮಾರ್ಗದರ್ಶಕರು ಮತ್ತು ಅಧಿಕಾರಿಗಳು ಹಾಗೂ 5 ಆರೈಕೆದಾರರು ಭಾಗವಹಿಸಿದರು. ಜಗತ್ತಿನ 140 ದೇಶಗಳಿಂದ 2500ಕ್ಕೂ ಹೆಚ್ಚು ವಿದ್ಯಾರ್ಥಿಗಳು ISEF ರೆಜೆನೆರಾನ್ ಅಂತರಾಷ್ಟ್ರೀಯ ವಿಜ್ಞಾನ ಮೇಳದಲ್ಲಿ ಭಾಗವಹಿಸಿದರು.
ಶಾಸ್ತಾ ನಾಕ್ ವರ್ಕಾಡಿ ಇವರು ಶ್ರೀನಾಥ್ ನ್ಯಾಕ್ ವಿ. ಹಾಗೂ ಚಂದ್ರಿಕಾ ಶ್ರೀನಾಥ್ ದಂಪತಿಯ ಪುತ್ರ. ಇವರು ಹರಿಯಾಣದ ಗುರುಕ್ರಮ್‌ನ ಲೋಟಾಸ್ ವ್ಯಾಲಿ ಇಂಟರ್ ನ್ಯಾಶನಲ್ ಸ್ಕೂಲ್‌ನಲ್ಲಿ ನಡೆದ ಸಿಬಿಎಸ್‌ಇ ರಾಷ್ಟ್ರೀಯ ವಿಜ್ಞಾನ ಫೇರ್ 2022-23ರಲ್ಲಿ ಚಿನ್ನದ ಪದಕ ಪಡೆದು, ನಂತರ ಡಿಸೆಂಬರ್ 2023 ರಲ್ಲಿ ಪುಣೆಯ ಬಾಲೆವಾಡಿ ಶಿವ ಛತ್ರಪತಿ ಸ್ಪೋಟ್ಸ್ ಕಾಂಪ್ಲೆಕ್ಸ್‌ನಲ್ಲಿ ನಡೆದ 50ನೇ ರಾಷ್ಟ್ರೀಯ ವೈಜ್ಞಾನಿಕ ಪ್ರದರ್ಶಿನಿಯಲ್ಲಿ ಭಾಗವಹಿಸಿ ಸ್ಪೂರ್ತಿದಾಯಕ ಬಹುಮಾನವನ್ನು ಪಡೆದಿರುತ್ತಾರೆ.
ಇವರನ್ನು ಸಂಸ್ಥೆಯ ಸಂಸ್ಥಾಪಕ ಡಾ. ಕೆ.ಸಿ. ನಾಕ್, ಕಾರ್ಯದರ್ಶಿ ಸಂಜಿತ್ ನಾಕ್, ಪ್ರಧಾನ ಸಲಹೆಗಾರ ರಮೇಶ್ ಕೆ. ಶಕ್ತಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ವೆಂಕಟೇಶ ಮೂರ್ತಿ ಮತ್ತು ಶಕ್ತಿ ವಸತಿಶಾಲೆಯ ಪ್ರಾಂಶುಪಾಲೆ ಬಬಿತಾ ಸೂರಜ್ ಅಭಿನಂದಿಸಿದ್ದಾರೆ.















