Mangalore: ಸಂಚಾರಿ ಉಲ್ಲಂಘನೆ ನ್ಯಾಯ ಸಂಹಿತೆಯಲ್ಲಿ ಬದಲಾವಣೆ-ಇನ್ಮುಂದೆ ಶಿಕ್ಷೆಯ ಪ್ರಮಾಣ ಹೆಚ್ಚಾಗಲಿದೆ: ಬಿ.ಪಿ. ದಿನೇಶ್ ಕುಮಾರ್

Mangalore: ಸಂಚಾರಿ ಉಲ್ಲಂಘನೆ ನ್ಯಾಯ ಸಂಹಿತೆಯಲ್ಲಿ ಬದಲಾವಣೆ-ಇನ್ಮುಂದೆ ಶಿಕ್ಷೆಯ ಪ್ರಮಾಣ ಹೆಚ್ಚಾಗಲಿದೆ: ಬಿ.ಪಿ. ದಿನೇಶ್ ಕುಮಾರ್


ಮಂಗಳೂರು: ಬಸ್ಸೆಂದರೆ ವಾಹನಗಳಲ್ಲಿ ದೊಡ್ಡಣ್ಣ, ಹಾಗಾಗಿ ಸಣ್ಣ ವಾಹನಗಳಿಗೆ ತೊಂದರೆಯಾಗದ ರೀತಿಯಲ್ಲಿ ಕಾರ್ಯನಿರ್ವಹಿಸಿರಿ. ನ್ಯಾಯಸಂಹಿತೆಯಲ್ಲಿ ಮುಂದಿನ ತಿಂಗಳಿನಿಂದ ಬದಲಾವಣೆಗಳು ಆಗಲಿದೆ. ಸಂಚಾರ ನಿಯಮ ಉಲ್ಲಂಘನೆಗಳ ಶಿಕ್ಷೆಯ ಪ್ರಮಾಣ ಮತ್ತು ದಂಡದ ಪ್ರಮಾಣ ಹೆಚ್ಚಾಗಲಿದೆ ಎಂದು ಮಂಗಳೂರು ನಗರ ಅಪರಾಧ ಮತ್ತು ಸಂಚಾರ ವಿಭಾಗದ ಉಪ ಪೊಲೀಸ್ ಆಯುಕ್ತ ಬಿ.ಪಿ. ದಿನೇಶ್ ಕುಮಾರ್ ಹೇಳಿದರು.

ದ.ಕ. ಬಸ್ ಮಾಲಕರ ಸಂಘ, ಕೆನರಾ ಬಸ್ಸು ಮಾಲಕರ ಸಂಘ ಹಾಗೂ ಸೈಂಟ್ ಅಲೋಶಿಯಸ್ ಕಾಲೇಜು(ಪರಿಗಣಿತ ವಿಶ್ವವಿದ್ಯಾನಿಲಯ) ಇದರ ಸಂಯುಕ್ತ ಆಶ್ರಯದಲ್ಲಿ ಬಸ್ಸು ಚಾಲಕರ-ನಿರ್ವಾಹಕರ ಮಾಹಿತಿ ಕಾರ್ಯಗಾರ-2024ಕ್ಕೆ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಮಥಾಯಸ್ ಸಭಾಂಗಣದಲ್ಲಿ ಮೇ.28 ರಂದು ಚಾಲನೆ ನೀಡಿ ಅವರು ಮಾತನಾಡಿದರು.

ಮಂಗಳೂರು ನಗರದ ರಸ್ತೆಯನ್ನು ಅಪಘಾತ ರಹಿತ ರಸ್ತೆ ಮಾಡಲು ಇಲಾಖೆ ಪಣ ತೊಟ್ಟಿದೆ. ಅದರ ಭಾಗವಾಗಿ ಕಾರ್ಯಗಾರ ನಡೆಸಲು ಸೂಚಿಸಲಾಗಿದೆ. 80 ವರ್ಷಗಳ ಇತಿಹಾಸದ ಖಾಸಗಿ ಬಸ್ಸಿನ ವ್ಯವಸ್ಥೆ ಮಂಗಳೂರಿನಲ್ಲಿದೆ. ರಸ್ತೆಗಳು ಹಾಗೇ ಇದ್ದರೂ ವಾಹನಗಳ ಸಂಖ್ಯೆ ದುಪ್ಪಟ್ಟಾಗಿವೆ. ಬಸ್ ಚಾಲಕರು ನಿಯಮಗಳ ಪಾಲನೆ ಮಾಡುವಲ್ಲಿ ಹಿಂದೇಟು ಹಾಕುವುದರಿಂದ ಕಾರ್ಯಗಾರಗಳು ಅನಿವಾರ್ಯವಾಗಿದೆ. ಪೊಲೀಸರು ದಂಡ ವಿಧಿಸಿದರೂ ನಿಯಮ ಉಲ್ಲಂಘನೆಗಳು ನಿಂತಿಲ್ಲ. ತಾಳ್ಮೆ ಅನ್ನುವುದು ಚಾಲಕರಲ್ಲಿ ಇಲ್ಲದಂತಾಗಿದೆ. ನಗರ ಸುರಕ್ಷಿತವಾಗಿದೆ ಅನ್ನುವ ಮನೋಭಾವ ಜನರಲ್ಲಿ ಮೂಡುವಂತಾಗಲು ಕಾರ್ಯಾಗಾರದಲ್ಲಿ ಸಿಗುವ ಮಾಹಿತಿಯನ್ನು  ಕರ್ತವ್ಯದಲ್ಲಿ ಅಳವಡಿಸಿಕೊಳ್ಳಿರಿ. ನ್ಯಾಯ ಸಂಹಿತೆಯಲ್ಲಿ ಬದಲಾವಣೆಗಳಾಗಿದ್ದು, ಐಪಿಸಿ ಬದಲಾಗಿ ಬಿಎನ್‌ಎಸ್ ನ್ಯಾಯಸಂಹಿತೆ ಮುಂದಿನ ತಿಂಗಳಿನಿಂದ ಜಾರಿಗೆ ಬರಲಿದ್ದು, ಶಿಕ್ಷೆಯ ಪ್ರಮಾಣ ಹೆಚ್ಚಾಗಲಿದೆ. ನಿರ್ಲಕ್ಷ್ಯತನದ ಚಾಲನೆ ಐಪಿಸಿ 279 ಬದಲಾಗಿ ಬಿಎನ್‌ಎಸ್ ಕಾಯಿದೆಯಡಿ 281, 6 ತಿಂಗಳ ಕಾರಾಗೃಹದಿಂದ 5,000 ದಂಡ,  3 ವರ್ಷ ಕಾರಾಗೃಹದಿಂದ 10,000 ದಂಡಕ್ಕೆ ಏರಿಕೆ, ಸಾಮಾನ್ಯ ಗಾಯ 337 ಐಪಿಸಿ ಬದಲಾಗಿ ಬಿಎನ್‌ಎಸ್ 125 ಎ, 125ಬಿ, ಮರಣ ಸಂಭವಿಸಿದಾಗ 304 ಎ ಬದಲು 106 ಬಿಎನ್‌ಎಸ್, ಎರಡು ವರ್ಷಗಳಿದ್ದ ಶಿಕ್ಷೆಯ ಪ್ರಮಾಣ 5 ವರ್ಷಕ್ಕೆ ಏರಿಕೆ, ಅಪಘಾತದ ಗಾಯಾಳುಗಳಿಗೆ ಪ್ರಾಥಮಿಕ ಚಿಕಿತ್ಸೆ ಕೊಡಿಸದೇ ಇದ್ದಲ್ಲಿ 134, 134ಎ, 134ಬಿ, ಅಪಘಾತದ ಮಾಹಿತಿ ಪೊಲೀಸ್ ಠಾಣೆಗೆ ನೀಡದೇ ಇರುವುದು, ಹಿಟ್ ಆಂಡ್ ರನ್ ಪ್ರಕರಣಗಳಿಗೆ 106(2) ಬಿಎನ್‌ಎಸ್ ಕಾಯಿದೆಗಳಡಿ ಪ್ರಕರಣಗಳು ದಾಖಲಾಗಲಿದೆ. 

ರೇಸಿಂಗ್, ಮದ್ಯಸೇವಿಸಿ ಚಾಲನೆ, ಮೊಬೈಲ್ ಫೋನ್ ಬಳಕೆ, ಓವರ್ ಟೇಕ್, ರೆಡ್‌ಲೈಟ್ ಉಲ್ಲಂಘನೆ, ಒನ್ ವೆ ಚಾಲನೆ, ರೇಸಿಂಗ್ ಪ್ರಕರಣಗಳಲ್ಲಿ ಚಾಲಕನ ಚಾಲನ ಪರವಾನಗಿ ರದ್ದುಪಡಿಸುವ ಕ್ರಮ ಕೈಗೊಳಲಾಗುವುದು. ಮುಂದೆ ಎಲ್ಲಾ ರಸ್ತೆಗಳಲ್ಲಿ ಸಿಸಿಟಿವಿ ಅಳವಡಿಕೆ ಆಗುವುದರಿಂದ ಹೆಲ್ಮೆಟ್, ಮೊಬೈಲ್ ಬಳಕೆ, ಸೀಟ್ ಬೆಲ್ಟ್ ಹಾಕದಿರುವುದನ್ನೂ ಪತ್ತೆಹಚ್ಚಲಾಗುವುದು. ಬಸ್ಸುಗಳ ನಿರ್ವಾಹಕರು ಟಿಕೇಟು ನೀಡದೆ ನಿಮ್ಮ ಮೇಲಿನ ವಿಶ್ವಾಸ ಕಳೆದುಕೊಳ್ಳಬೇಡಿ. ಕರ್ಕಷ ಹಾನ್೯ಗಳ ಕುರಿತು  ಜಾಗೃತಿ ವಹಿಸಿದ್ದರೂ, ಮುಂಬೈ, ಬೆಂಗಳೂರು ದೂರದೂರಿಗೆ ತೆರಳುವ ಬಸ್ಸುಗಳ ಹಾನ್೯ ಕುರಿತು ವ್ಯಾಪಕ ದೂರುಗಳು ಬರುತ್ತಿವೆ. ಸ್ವಶಿಸ್ತು ಕಾಪಾಡುವ ಮೂಲಕ ಸಾರ್ವಜನಿಕರ ಜವಾಬ್ದಾರಿಯನ್ನು ನಿರ್ವಹಿಸಿ ಬಸ್ ನಿಲ್ದಾಣಕ್ಕೇ ಬಸ್ಸುಗಳ ಕೊಂಡೊಯ್ಯಿರಿ. ಮೀಸಲು ಸೀಟುಗಳಲ್ಲಿ ಅವರಿಗೇ ಅವಕಾಶ ಕಲ್ಪಿಸಿರಿ. ಸಂಘ ಹೊರಡಿಸಿರುವ ಭಿತ್ತಿಪತ್ರದಲ್ಲಿ ಅವಶ್ಯಕ ಮಾಹಿತಿಗಳಿದ್ದು, ಎಲ್ಲರೂ ಪಾಲಿಸಿರಿ ಎಂದರು.

ಸೈಂಟ್ ಅಲೋಶಿಯಸ್ ವಿಶ್ವವಿದ್ಯಾನಿಲಯದ ಕುಲಸಚಿವ ಡಾ. ಆಲ್ವಿನ್ ಡೇಸಾ, ಸಹಾಯಕ ಪೊಲೀಸ್ ಆಯುಕ್ತ ನಜ್ಞಾ ಫಾರೂಕಿ, ಪ್ರಾದೇಶಿಕ ಸಾರಿಗೆ ಅಧಿಕಾರಿ ಶ್ರೀಧರ್ ಮಲ್ನಾಡ್, ಉಪನ್ಯಾಸಕ, ರಾಷ್ಟ್ರಮಟ್ಟದ ತರಬೇತುದಾರ ರಾಜೇಂದ್ರ ಭಟ್, ಕೆನರಾ ಬಸ್ ಮಾಲಕರ ಸಂಘದ ಉಪಾಧ್ಯಕ್ಷ ಜೀವಂದರ್ ಅಧಿಕಾರಿ ಉಪಸ್ಥಿತರಿದ್ದರು.

ಅಧ್ಯಕ್ಷ ಅಝೀಝ್ ಪರ್ತಿಪಾಡಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಪಿಲಾರ್ ವಂದಿಸಿ, ಆರ್.ಜೆ ಅಭಿಷೇಕ್ ಶೆಟ್ಟಿ ನಿರೂಪಿಸಿದರು.

ಕೊಯಿಲಾಡಿ ಸುರೇಶ್ ನಾಯಕ್, ಸಂಚಾರಿ ಠಾಣೆಯ ಠಾಣಾಧಿಕಾರಿಗಳಾದ ಆನಂದ್, ಉರಗಪ್ಪ, ದೀಪಕ್, ಕೃಷ್ಣಾನಂದ ನಾಯಕ್ ಭಾಗವಹಿಸಿದ್ದರು.


ಬಸ್ ಟೈಮಿಂಗ್ ಪರಿಷ್ಕರಣೆ ಅಗತ್ಯ:

ನಗರದ ಖಾಸಗಿ ಬಸ್ಸುಗಳಲ್ಲಿ ಟೈಮಿಂಗ್ ವಿಚಾರದ ಕುರಿತು ಪರಿಷ್ಕರಣೆ ಅಗತ್ಯ ಆಗಬೇಕಿದೆ. ಸಂಘ ಈ ಕುರಿತು ಹೆಚ್ಚಿನ ಒಲವು ತೋರಿಸಬೇಕಿದೆ. ಮಂಗಳೂರು ನಗರದಲ್ಲಿ 386 ಸಿಟಿ ಹಾಗೂ 566 ಸರ್ವಿಸ್ ಬಸ್ಸುಗಳು ಸಂಚರಿಸುತ್ತಿವೆ. ಈ ಪೈಕಿ ಇತ್ತೀಚೆಗೆ 236 ಕರ್ಕಷ ಹಾರನ್ ತೆಗೆದು ಪ್ರಕರಣ ದಾಖಲಿಸಲಾಗಿದೆ. ಆದರೂ ದೂರುಗಳು ನಿರಂತರವಾಗಿ ಬರುತ್ತಲೇ ಇದೆ. ಕಂಪ್ಯೂಟರೈಸ್ಡ್ ಟಿಕೇಟ್ ಯಂತ್ರವನ್ನು ಕಡ್ಡಾಯವಾಗಿ ಬಳಸಿ, ಕಡ್ಡಾಯ ಟಿಕೇಟನ್ನು ಪ್ರಯಾಣಿಕರಿಗೆ ನೀಡಿ. ಪ್ರಯಾಣಿಕರೊಂದಿಗೆ ಸಭ್ಯತೆಯಿಂದ ವರ್ತಿಸಿರಿ, ಮಹಿಳಾ ಪ್ರಯಾಣಿಕರನ್ನು ಬಸ್ಸೊಳಗಡೆ ಹತ್ತಿಸುವಾಗ ತಾಳ್ಮೆಯಿಂದ ವರ್ತಿಸಿರಿ. ಡೂರ್‌ಗಳನ್ನು ಕಡ್ಡಾಯವಾಗಿ ಹಾಕಬೇಕು. -ನಜ್ಞಾ ಫಾರೂಕಿ, ಸಹಾಯಕ ಪೊಲೀಸ್ ಆಯುಕ್ತ.






Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article