Mangalore: ಮಂಗಳೂರು ವಿ.ವಿ.ಯನ್ನು ಮುಚ್ಚದಂತೆ ಡಿವೈಎಫ್‌ಐ ಮನವಿ
Wednesday, May 29, 2024
ಮಂಗಳೂರು: ಮಂಗಳೂರು ವಿ.ವಿ. ಅಧೀನದ ಕೊಣಾಜೆ ಪದವಿ ಕಾಲೇಜು ಮುಚ್ಚುವ ತೀರ್ಮಾನವನ್ನು ಕೈ ಬಿಡಲು ಕೋರಿ ಡಿವೈಎಫ್‌ಐ ಉಳ್ಳಾಲ ತಾಲೂಕು ಸಮಿತಿ ವತಿಯಿಂದ ಮಂಗಳೂರು ವಿಧಾನಸಭಾ ಕ್ಷೇತ್ರ ಶಾಸಕ, ಸಭಾಪತಿ ಯು.ಟಿ. ಖಾದರ್ ಅವರಿಗೆ ಮನವಿ ಸಲ್ಲಿಸಲಾಯಿತು.
ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಉಳ್ಳಾಲ ತಾಲೂಕು ಅಧ್ಯಕ್ಷ ಅಡ್ವೊಕೇಟ್ ನಿತಿನ್ ಕುತ್ತಾರ್ ಕಾರ್ಯದರ್ಶಿ ರಿಝ್ವಾನ್ ಹರೇಕಳ, ಕೋಶಾಧಿಕಾರಿ ಅಶ್ಫಾಕ್ ಅಲೇಕಳ, ಮುಖಂಡ ಸರ್ಫರಾಜ್ ಗಂಡಿ ಉಪಸ್ಥಿತರಿದ್ದರು.