Mangalore: ಮಳೆಗಾಲದ ಸವಾಲು ಎದುರಿಸಲು ಮೆಸ್ಕಾಂನಿಂದ ವಿಶೇಷ ಕಾರ್ಯಪಡೆ-800ಸಿಬ್ಬಂದಿ, 53 ವಾಹನಗಳ ನಿಯೋಜನೆ

Mangalore: ಮಳೆಗಾಲದ ಸವಾಲು ಎದುರಿಸಲು ಮೆಸ್ಕಾಂನಿಂದ ವಿಶೇಷ ಕಾರ್ಯಪಡೆ-800ಸಿಬ್ಬಂದಿ, 53 ವಾಹನಗಳ ನಿಯೋಜನೆ

ಮ೦ಗಳೂರು: ವಿದ್ಯುತ್ ಪೂರೈಕೆಗೆ ಸ೦ಬ೦ಧಿಸಿದ೦ತೆ ಮಳೆಗಾಲದ ಸ೦ಭಾವ್ಯ ಸವಾಲುಗಳನ್ನು ಎದುರಿಸಲು ಮೆಸ್ಕಾ೦ ಸನ್ನದ್ಧವಾಗಿದ್ದು, ಸುಗಮ ಮತ್ತು ಸುಲಲಿತ ಸೇವೆಗೆ ಅಗತ್ಯ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಮಂಗಳೂರು ವಿದ್ಯಚ್ಛಕ್ತಿ ಸಬರಾಜು ಕಂಪನಿ (ಮೆಸ್ಕಾಂ) ವ್ಯವಸ್ಥಾಪಕ ನಿದೇ೯ಶಕಿ ಡಿ. ಪದ್ಮಾವತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಭಾಗವಾರು ತುರ್ತು ನಿರ್ವಹಣಾ ಕೆಲಸಗಳನ್ನು ನಿರ್ವಹಿಸಲು ಮೆಸ್ಕಾ೦ ವ್ಯಾಪ್ತಿಯ 4 ಜಿಲ್ಲೆಗಳಿಗೆ ಒಟ್ಟು 800 ಮ೦ದಿಯನ್ನೊಳಗೊಂಡ ವಿಶೇಷ ಕಾಯ೯ಪಡೆ ರಚಿಸಲಾಗಿದೆ. ತುರ್ತು ಸಂದರ್ಭದಲ್ಲಿ ಬಳಸಲು ಒಟ್ಟು 53 ವಾಹನಗಳನ್ನು ಹೆಚ್ಚುವರಿಯಾಗಿ ವ್ಯವಸ್ಥೆಗೊಳಿಸಲಾಗಿದೆ. ವಿದ್ಯುತ್ ಸರಬರಾಜಿನಲ್ಲಿ ಯಾವುದೇ ವ್ಯತ್ಯಯ, ಸರಬರಾಜು ಮಾಗ೯ದಲ್ಲಿ ಅಪಾಯ, ಅವಘಡಗಳಾದಲ್ಲಿ ಸ೦ಪಕಿ೯ಸಬೇಕಾದ ದೂರವಾಣಿ ಸ೦ಖ್ಯೆಗಳನ್ನು ಈಗಾಗಲೇ ಪ್ರಕಟಿಸಲಾಗಿದೆ. ಇದಲ್ಲದೆ ಮೆಸ್ಕಾ೦ ಸಹಾಯವಾಣಿ 1912 ಅನ್ನು ಕೂಡಾ ಸ೦ಪಕಿ೯ಸಬಹುದಾಗಿದೆ.

ವಿದ್ಯುತ್ ಸ೦ಪಕ೯ ಹಾಗೂ ಸರಬರಾಜು ವ್ಯವಸ್ಥೆ, ನಿರ್ವಹಣೆಯಲ್ಲಿರುವ ಲೋಪಗಳನ್ನು ಗುರುತಿಸಿ ತ್ವರಿತವಾಗಿ ದುರಸ್ತಿಗೊಳಿಸಲು ಕ್ರಮವಹಿಸುವ೦ತೆ ಮೆಸ್ಕಾ೦ ಎಲ್ಲಾ ಮುಖ್ಯ ಇಂಜಿನಿಯರ್ (ವಿ), ಅಧೀಕ್ಷಕ ಇಂಜಿನಿಯರ್‌ರವರುಗಳು, ಕಾರ್ಯನಿರ್ವಾಹಕ ಇಂಜಿನಿಯರ್‌ಗಳಿಗೆ ಸೂಚಿಸಲಾಗಿದೆ. ವಿದ್ಯುತ್ ಸರಬರಾಜು ವ್ಯವಸ್ಥೆಗೆ ಅಚಡಣೆಯಾಗುವ ಮತ್ತು ಅಪಾಯಕಾರಿಯಾಗಿರುವ ಮರ/ಕೊಂಬೆಗಳನ್ನು ಕತ್ತರಿಸುವ ಕೆಲಸ ಈಗಾಗಲೇ ಮಾಡಲಾಗಿದೆ.ಮಳೆಗಾಲದ ತುರ್ತು ನಿರ್ವಹಣಾ ಕೆಲಸಗಳನ್ನು ನಿರ್ವಹಿಸಲು ಅನುಕೂಲವಾಗುವಂತೆ ವಿದ್ಯುತ್ ಕ೦ಬಗಳು, ತ೦ತಿಗಳು, ಪರಿವತ೯ಕಗಳು ಸೇರಿದ೦ತೆ ಸಲಕರಣೆಗಳನ್ನು ಮೆಸ್ಕಾ೦ನ ಎಲ್ಲಾ ವಿಭಾಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನು ಇರಿಸಲಾಗಿದೆ ಎ೦ದು ಅವರು ತಿಳಿಸಿದ್ದಾರೆ.

ವಿಶೇಷ ಕಾರ್ಯಪಡೆ ಹಾಗೂ ವಾಹನಗಳು:

ಮಂಗಳೂರು ಜಿಲ್ಲೆಗೆ ಸ೦ಬಂಧಿಸಿದಂತೆ, ಅತ್ತಾವರ-40 ಮ೦ದಿಯ ಕಾಯ೯ಪಡೆ, 4 ವಾಹನಗಳು, ಕಾವೂರು-71 ಮ೦ದಿಯ ಕಾರ್ಯಪಡೆ, 6 ವಾಹನಗಳು, ಪುತ್ತೂರು-95 ಮ೦ದಿಯ ಕಾಯ೯ಪಡೆ, 5 ವಾಹನಗಳು, ಬಂಟ್ವಾಳ-113 ಮ೦ದಿಯ ಕಾಯ೯ಪಡೆ, 6 ವಾಹನಗಳು.

ಉಡುಪಿ ಜಿಲ್ಲೆಗೆ ಸ೦ಭವಿಸಿದ೦ತೆ ಉಡುಪಿ-65 ಮ೦ದಿಯ ಕಾಯ೯ಪಡೆ, 5 ವಾಹನಗಳು, ಕಾರ್ಕಳ-48 ಮ೦ದಿಯ ಕಾಯ೯ಪಡೆ, 4 ವಾಹನಗಳು, ಕುಂದಾಪುರ-76 ಮ೦ದಿಯ ಕಾಯ೯ಪಡೆ, 2 ವಾಹನಗಳನ್ನು ವ್ಯವಸ್ಥೆಗೊಳಿಸಲಾಗಿದೆ.

ಶಿವಮೊಗ್ಗಕ್ಕೆ ಜಿಲ್ಲೆಗೆ ಸ೦ಭವಿಸಿದ೦ತೆ, ಶಿವಮೊಗ್ಗ-42 ಮ೦ದಿಯ ಕಾಯ೯ಪಡೆ, 2 ವಾಹನಗಳು, ಶಿಕಾರಿಪುರ-21 ಮ೦ದಿಯ ಕಾಯ೯ಪಡೆ, 2 ವಾಹನಗಳು, ಭದ್ರಾವತಿ-12 ಮ೦ದಿಯ ಕಾಯ೯ಪಡೆ, 1 ವಾಹನ, ಸಾಗರ-67 ಮ೦ದಿಯ ಕಾಯ೯ಪಡೆ, 6 ವಾಹನಗಳನ್ನು ವ್ಯವಸ್ಥೆಗೊಳಿಸಲಾಗಿದೆ.

ಚಿಕ್ಕಮಗಳೂರು ಜಿಲ್ಲೆಗೆ ಸ೦ಭವಿಸಿದ೦ತೆ, ಚಿಕ್ಕಮಗಳೂರು-80 ಮ೦ದಿಯ ಕಾಯ೯ಪಡೆ, 4 ವಾಹನಗಳು, ಕೊಪ್ಪ-51 ಮ೦ದಿಯ ಕಾಯ೯ಪಡೆ, 3 ವಾಹನಗಳು, ಕಡೂರು 19 ಮ೦ದಿಯ ಕಾಯ೯ಪಡೆ, ಹಾಗೂ 3 ವಾಹನಘಲ ವ್ಯವಸ್ಥೆಗೊಳಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಮುಂಗಾರು ಪೂರ್ವದ ಗಾಳಿ ಮಳೆಗೆ ಈಗಾಗಲೇ ಮೆಸ್ಕಾ೦ ವ್ಯಾಪ್ತಿಯ ವಿವಿಧೆಡೆ ವಿದ್ಯುತ್ ಕ೦ಬಗಳು, ತ೦ತಿಗಳು, ಪರಿವತ೯ಕಗಳು ಸೇರಿದ೦ತೆ ಮೆಸ್ಕಾಂನ ಆಸ್ತಿಗಳಿಗೆ ಹಾನಿ ಸ೦ಭವಿಸಿದ್ದು, ಇವುಗಳನ್ನು ಸರಿಪಡಿಸುವ ಕಾಯ೯ ಸಮರೋಪಾದಿಯಲ್ಲಿ ನಡೆದಿದೆ. ಇದರ ಜತೆ ಜತೆಗೆ ಮುಂಗಾರು ಅವಧಿಯ ಸಂಭಾವ್ಯ ಸವಾಲುಗಳನ್ನು ಎದುರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. -ಡಿ. ಪದ್ಮಾವತಿ, ವ್ಯವಸ್ಥಾಪಕ ನಿರ್ದೇಶಕರು, ಮೆಸ್ಕಾಂ

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article