
Mangalore: ವಸಂತ ಬಂಗೇರರ ನಿಧನಕ್ಕೆ ಎಂ.ಎನ್. ರಾಜೇಂದ್ರ ಕುಮಾರ್ ಸಂತಾಪ
Wednesday, May 8, 2024
ಮಂಗಳೂರು: ರಾಜಕೀಯ ರಂಗದಲ್ಲಿ ಆದರ್ಶರಾಗಿದ್ದ ಮಾಜಿ ಸಚಿವ ವಸಂತ ಬಂಗೇರ ಅವರು ಸರಳ ಸಜ್ಜನ ರಾಜಕಾರಣಿ. ರಾಜಕೀಯ ಕ್ಷೇತ್ರದಲ್ಲಿ ಹಲವಾರು ವರ್ಷಗಳಿಂದ ಅವಿರತ ಸೇವೆಯನ್ನು ಗೈದಿರುವ ಇವರು ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾಗಿ ಹಾಗೂ ಕರ್ನಾಟಕ ಸರಕಾರದ ಮಾಜಿ ಸಚಿವರಾಗಿಯೂ ಪ್ರಾಮಾಣಿಕ ಸೇವೆ ಸಲ್ಲಿಸಿದ್ದರು. ಇವರ ನಿಧನಕ್ಕೆ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳ ಬೆಂಗಳೂರು ಹಾಗೂ ಎಸ್‌ಸಿಡಿಸಿಸಿ ಬ್ಯಾಂಕಿನ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಸಂತಾಪ ಸೂಚಿಸಿದ್ದಾರೆ.