Mangalore: ಸಮಗ್ರ ಸಾಧನೆಗೆ ಎಸ್‌ಸಿಡಿಸಿಸಿ ಬ್ಯಾಂಕ್‌ಗೆ ಲೀಡ್ ಬ್ಯಾಂಕ್ ಪ್ರಶಸ್ತಿ
Tuesday, May 28, 2024
ಮಂಗಳೂರು: ಸಹಕಾರಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ 2023-24ನೇ ಸಾಲಿನಲ್ಲಿ ಸಾಧಿಸಿದ ಸಮಗ್ರ ಸಾಧನೆಗೆ ಲೀಡ್ ಬ್ಯಾಂಕ್ ಪ್ರಶಸ್ತಿಗೆ ಪಾತ್ರವಾಗಿದೆ.
ಪ್ರತೀ ವರ್ಷದಂತೆ 2023-24ನೇ ಸಾಲಿನಲ್ಲಿ ಠೇವಣಿ ಸಂಗ್ರಹಣೆ ಮತ್ತು ಸಾಲ ನೀಡಿಕೆಯಲ್ಲಿ ಗಮನಾರ್ಹ ಸಾಧನೆಗೈದಿರುವ ಬ್ಯಾಂಕ್, ಮುಖ್ಯವಾಗಿ ಕೃಷಿ ಸಾಲ ಮತ್ತು ಆದ್ಯತಾ ವಲಯ ಸಾಲ ನೀಡಿಕೆಯಲ್ಲೂ ಮಹತ್ತರ ಪ್ರಗತಿಯನ್ನು ಸಾಧಿಸಿದೆ.
ರಾಷ್ಟ್ರೀಕೃತ ಬ್ಯಾಂಕ್‌ಗಳ ಪೈಪೋಟಿಯ ನಡುವೆಯೂ ಬ್ಯಾಂಕಿನ ಈ ಮಹತ್ತರವಾದ ಸಾಧನೆಯನ್ನು ದಕ್ಷಿಣ ಕನ್ನಡ ಲೀಡ್ ಬ್ಯಾಂಕ್ ಗುರುತಿಸಿದ್ದು, ಮೇ.24 ರಂದು ದಕ್ಷಿಣ ಕನ್ನಡ ಲೀಡ್ ಬ್ಯಾಂಕ್ ನೇತೃತ್ವದಲ್ಲಿ ನಡೆದ 2023-24ನೇ 4ನೇ ತ್ರೈಮಾಸಿಕ ಬ್ಲಾಕ್ ಲೆವೆಲ್ ಬ್ಯಾಂಕರ್ಸ್ ಕಮಿಟಿ ಸಭೆಯಲ್ಲಿ ಠೇವಣಿ ಸಂಗ್ರಹಣೆ ಮತ್ತು ಸಾಲ ನೀಡಿಕೆ ಅನುಪಾತದಲ್ಲಿ ತೃತೀಯ ಪ್ರಶಸ್ತಿ ನೀಡಿ ಗೌರವಿಸಿದೆ.