Manjeswara: ರಾಣಿಪುರದಲ್ಲಿ ಕೊರಗ ಜನಾಂಗದ ಬಾಲ ಸಭಾ ಮಕ್ಕಳಿಗೆ ತ್ರಿದಿನ ಸಹವಾಸ ಶಿಬಿರ

Manjeswara: ರಾಣಿಪುರದಲ್ಲಿ ಕೊರಗ ಜನಾಂಗದ ಬಾಲ ಸಭಾ ಮಕ್ಕಳಿಗೆ ತ್ರಿದಿನ ಸಹವಾಸ ಶಿಬಿರ


ಮಂಜೇಶ್ವರ: ಕುಟುಂಬಶ್ರೀ ಜಿಲ್ಲಾ ಮಿಷನ್‌ನ ನೇತೃತ್ವದಲ್ಲಿ ಆದಿವಾಸಿ ವಲಯದ ಕೊರಗ ಜನಾಂಗದ ಬಾಲಸಭಾ ಮಕ್ಕಳಿಗಾಗಿ ರಾಣಿಪುರ ವ್ಯೂ ವ್ಯಾಲಿಯಲ್ಲಿ ಮೂರು ದಿನಗಳ ಸಹವಾಸ ಶಿಬಿರವನ್ನು ಆಯೋಜಿಸಲಾಯಿತು. 

ಕನಸು ಜಾಗ ಎಂಬಾ ಹೆಸರಿನಲ್ಲಿ ಊರಿನ ಒಳಗೆ ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳನ್ನು ಆಧರಿಸಿದ ಕಥೆಗಳನ್ನು ಮಕ್ಕಳು ಪ್ರಸ್ತುತಪಡಿಸಿ ಚಿತ್ರಕತೆಯಾಗಿ ನಿರ್ದೇಶನ ಮಾಡುವ ಮಕ್ಕಳ ಯೋಜನೆಯಾಗಿದೆ.

ಬದುಕುಳಿಯುವ ವಿಷಯಗಳಿಗೆ ಒತ್ತು ನೀಡುವ ದೃಶ್ಯ ಆವಿಷ್ಕಾರಗಳನ್ನು ಮಕ್ಕಳೇ ಪ್ರಸ್ತುತಪಡಿಸುವಾಗ ಅಂಚಿನಲ್ಲಿರುವ ಸಮುದಾಯವನ್ನು ಮುಖ್ಯವಾಹಿನಿಗೆ ತರುವುದು ಮತ್ತು ಸಮಸ್ಯೆಗಳನ್ನು ಪರಿಹರಿಸುವುದು ಇದರ ಗುರಿಯಾಗಿದೆ. ವಿವಿಧ ಹಂತಗಳಲ್ಲಿ ಆಯೋಜಿಸುವ ಜಿಲ್ಲಾ ಮಟ್ಟದ ಕಿರುಚಿತ್ರೋತ್ಸವ ಮುಂತಾದವುಗಳನ್ನು ಆಯೋಜಿಸಲಾಗುವುದು.

ಕುಟುಂಬಶ್ರೀ ಜಿಲ್ಲಾ ಮಿಷನ್ ಸಂಯೋಜಕ ಟಿ.ಟಿ. ಸುರೇಂದ್ರನ್ ಶಿಬಿರವನ್ನು ಉದ್ಘಾಟಿಸಿದರು. ತಜ್ಞ ತರಬೇತುದಾರರಾದ ನಿರ್ಮಲ್ ಕಾಡಗಮ್, ಉದಯ್ ಸಾರಂಗ್, ಕೃಷ್ಣಪ್ಪ ಬಂಬಿಲ, ವರ್ಷಾ ಸಂಪನ್ಮೂಲ ವ್ಯಕ್ತಿಗಳಾಗಿದ್ದರು. ಎಸ್. ಯದುರಾಜ್ ಶಿಬಿರ ನಿರ್ವಹಿಸಿದರು.




Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article