
Moodubidire: ಮೂಡುಬಿದಿರೆ ಜೈನಮಠದಲ್ಲಿ ಆರೋಗ್ಯ ಶಿಬಿರ
Thursday, May 30, 2024
ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಹಾಗೂ ಧವಳತ್ರಯ ಜೈನ ಕಾಶಿ ಟ್ರಸ್ಟ್ ಶ್ರೀ ಜೈನಮಠ ವತಿಯಿಂದ ನೇತ್ರ, ಕಿವಿ ಮೂಗು ಹಾಗೂ ದಂತ ಉಚಿತ ತಪಾಸಣೆ ಶಿಬಿರ ಗುರುವಾರ ಭಟ್ಟಾರಕ ಭವನದಲ್ಲಿ ನಡೆಯಿತು.
ಜೈನಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ಶಿಬಿರಕ್ಕೆ ಚಾಲನೆ ನೀಡಿದರು. 10 ಮಂದಿ ವೈದ್ಯರನ್ನು ಗೌರವಿಸಿದರು.
ವಕೀಲೆ ಶ್ವೇತಾ ಜೈನ್, ಬಸದಿ ಮೊಕ್ತೇಸರ ಪಟ್ಣ ಶೆಟ್ಟಿ ಸುದೇಶ ಕುಮಾರ್ ಉಪಸ್ಥಿತರಿದ್ದರು.
ಆಳ್ವಾಸ್ ಆಯುರ್ವೇದ ಆಸ್ಪತ್ರೆಯ ಶಾಲಾಕ್ಯ ತಂತ್ರ ವಿಭಾಗದ ಡಾ. ರಶ್ಮಿ ಸುವರ್ಣ, ಕಿರಿಯ ವೈದ್ಯ ಡಾ. ಅನಘ ಕೆ.ಪಿ., ಡಾ. ಅಭಿಷೇಕ್ ಟಿ.ಆರ್., ಡಾ. ಸುನೀತಾ ಪಿ, ಡಾ. ಸ್ಪರ್ಶ ಎಸ್.ಕೆ., ಡಾ. ದೀಕ್ಷಾ, ಡಾ. ಜೀನು ತಪಾಸಣೆ ನಡೆಸಿದರು.
ಮಠದ ವ್ಯವಸ್ಥಾಪಕ ಸಂಜಯಂತ ಕುಮಾರ್ ಸ್ವಾಗತಿಸಿದರು. ಡಾ ಅಭಿಷೇಕ್ ವಂದಿಸಿದರು.