
Moodubidire: ನಿವೃತ್ತ ಕನ್ಸಲ್ಟಿಂಗ್ ಎಂಜಿನಿಯರ್ ಕೆ.ಪಿ. ಆನಂದ ಶೆಟ್ಟಿ
Wednesday, May 8, 2024
ಮೂಡುಬಿದಿರೆ: ನಿವೃತ್ತ ಕನ್ಸಲ್ಟಿಂಗ್ ಎಂಜಿನಿಯರ್ ಕಡಂದಲೆ ಪರಾರಿ ಆನಂದ ಶೆಟ್ಟಿ (88) ಅವರು ಮೇ.8 ರಂದು ನಿಧನ ಹೊಂದಿದರು. ಮೃತರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಮದ್ರಾಸ್ ಪ್ರಾಂತ್ಯದ ಇಂಡಿಯಲ್ಲಿರುವ ಸರಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ದ.ಕ.ದವರಿಗಾಗಿ ಲಭ್ಯವಿದ್ದ ಒಂದು ಸೀಟಿನ ಮೂಲಕ ಪ್ರವೇಶ ಪಡೆದು ಸಿವಿಲ್ ಎಂಹಿನಿಯರಿಂಗ್ ಪದವಿ ಗಳಿಸಿದ್ದ ಆನಂದ ಶೆಟ್ಟಿ ಅವರು ಕುದುರೆಮುಖ ಕಂಪೆನಿ, ಎಂಸಿಎಫ್, ಒರಿಸ್ಸಾದ ಉಕ್ಕು ಕಾರ್ಖನೆ, ಧಾರವಾಡ ಎಂಜಿನಿಯರಿಂಗ್ ಕಾಲೇಜು ಮೊದಲಾದೆಡೆಗಳಲ್ಲಿ ಕನ್ಸಲ್ಟಿಂಗ್ ಎಂಜಿನಿಯರ್ ಆಗಿ ಸೇವೆ ಸಲ್ಲಿಸಿ ಮಂಗಳೂರಲ್ಲಿ ನೆಲೆಸಿದ್ದರು.