Udupi: ರಸ್ತೆಯಲ್ಲಿ ನಮಾಜ್-ಕ್ರಮಕ್ಕೆ ಆಗ್ರಹ: ಕೆ.ಎಸ್. ಈಶ್ವರಪ್ಪ
Tuesday, May 28, 2024
ಉಡುಪಿ: ಮಂಗಳೂರಿನಲ್ಲಿ ರಸ್ತೆಯಲ್ಲೇ ನಮಾಜ್ ಮಾಡಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಆಗ್ರಹಿಸಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಗಳೂರು ಪಾಕಿಸ್ತಾನದಲ್ಲಿದೆಯಾ? ನಮಾಜ್ ಮಾಡಿದ್ದೂ ಅಲ್ಲದೇ ‘ನಾವು ಚುನಾಯಿಸಿದ ಸರ್ಕಾರ, ಟಿಪ್ಪೂ ಸರ್ಕಾರ’ ಎಂದು ಹೇಳುವ ಮೂಲಕ ದಾರ್ಷ್ಯ ಮೆರೆಯಲಾಗಿದೆ. ರಾಜ್ಯದಲ್ಲಿ ಸರ್ಕಾರ ಇದೆಯೇ ಅಥವಾ ಸತ್ತುಹೋಗಿದೆಯೇ? ಮುಖ್ಯಮಂತ್ರಿ, ಗೃಹಸಚಿವರು ಇದ್ದಾರೆಯೋ ಅಥವಾ... ಎಂದು ಪ್ರಶ್ನಿಸಿದರು.
ರಸ್ತೆಯಲ್ಲಿ ನಮಾಜ್ ಮಾಡಿದವರು ಮುಂದೆ ಮುಖ್ಯಮಂತ್ರಿ, ಗೃಹಸಚಿವರ ಮನೆಯಲ್ಲಿ ನಮಾಜ್ ಮಾಡುತ್ತಾರೆ, ಹಿಂದೂ ನಾಯಕರ ಮನೆಯಲ್ಲಿ ನಮಾಜ್ ಮಾಡುವುದಾಗಿ ಹೇಳುತ್ತಾರೆ. ಆದ್ದರಿಂದ ಆ ಪ್ರಕರಣದ ವಿರುದ್ಧ ಕ್ರಮ ಕೈಗೊಳ್ಳಿ ಎಂದವರು ಸರಕಾರವನ್ನು ಒತ್ತಾಯಿಸಿದರು.
ಉಡುಪಿಯಲ್ಲಿ ಹಿಜಾಬ್ ವಿಚಾರವಾಗಿ ಗಲಾಟೆ ನಡೆಯಿತು. ಬಳಿಕ ಹಿಂದೂ ಸಮಾಜ ಎಚ್ಚೆತ್ತುಕೊಂಡಿತು. ಇದೀಗ ರಸ್ತೆಯಲ್ಲೇ ನಮಾಜ್ ಮಾಡಲು ಬಿಟ್ಟದ್ದು ತಪ್ಪು. ಅದೇ ರೀತಿ ಟಿಪ್ಪು ಸುಲ್ತಾನ್ ರಾಜ್ಯ ಎಂದು ಹೇಳುವವರ ವಿರುದ್ಧ ದೇಶದ್ರೋಹದ ಕೇಸ್ ಹಾಕಿ ಕ್ರಮ ಕೈಗೊಳ್ಳಿ ಎಂದರು.