
Ujire: ಡಾ. ಹೆಗ್ಗಡೆ ಬಂಗೇರಾರ ನಿಧನಕ್ಕೆ ಸಂತಾಪ
Wednesday, May 8, 2024
ಉಜಿರೆ: ವಸಂತ ಬಂಗೇರರವರು ಸ್ವರ್ಗಸ್ಥರಾದ ವಿಚಾರ ತಿಳಿದು ವಿಷಾದವಾಯಿತು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಸಂತಾಪ ಸೂಚಿಸಿದ್ದಾರೆ.
ಅವರು ನಮ್ಮ ತಾಲ್ಲೂಕಿನ ಶಾಸಕರಾಗಿ ಜನಸ್ನೇಹಿಯಾಗಿದ್ದರು. ಸಾಮಾನ್ಯ ಜನರೊಳಗೆ ಹಾಗೂ ಕುಟುಂಬದಲ್ಲಿ ವಿಚಾರ-ಭೇದ ಬಂದಾಗ ನಮ್ಮ ತುಳುನಾಡಿನಲ್ಲಿ ಹೇಳುವಂತೆ ಪಂಚಾತಿಕೆ ಅಂದರೆ ಒಗ್ಗೂಡಿಸುವಿಕೆಗೆ ಪ್ರಯತ್ನ ಮಾಡುತ್ತಿದ್ದರು. ಅವರ ಈ ಹವ್ಯಾಸದಿಂದ ಅವರಿಗೆ ಎಷ್ಟೇ ಕಷ್ಟವಾದರೂ ಸಮಾಜದ ಅನೇಕ ಕುಟುಂಬಗಳನ್ನು ಒಗ್ಗೂಡಿಸಿ ಸಮಸ್ಯೆ ಪರಿಹಾರ ಮಾಡುತ್ತಿದ್ದರು. ಅವರ ಈ ಸಾಧನೆಯಿಂದಾಗಿ ಸಮಾಜದಲ್ಲಿರುವ ಬಿರುಕು ಬಿಟ್ಟ ಅನೇಕ ಕುಟುಂಬಗಳು ಮತ್ತೆ ಒಂದಾಗುತ್ತಿದ್ದವು. ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಸಂತಾಪ ವ್ಯಕ್ತ ಪಡಿಸಿದ್ದಾರೆ.