
Bantwal: ಕಾಗುಡ್ಡಬಳಿ ಬಸ್ ಪಲ್ಟಿ-ಪ್ರಯಾಣಿಕರಿಬ್ಬರು ಪಾರು
Sunday, June 16, 2024
ಬಂಟ್ವಾಳ: ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ಸೊಂದು ಪಲ್ಟಿಯಾದ ಘಟನೆ ಪೊಳಲಿ ಸಮೀಪದ ಕಮ್ಮಾಜೆ ಕಾಗುಡ್ಡೆ ಎಂಬಲ್ಲಿ ನಡೆದಿದೆ.
ಬಿ.ಸಿ.ರೋಡಿನಿಂದ ಕಲ್ಪನೆ, ಕೊಳತ್ತಮಜಲು ಮೂಲಕ ಮಂಗಳೂರು ತೆರಳುತ್ತಿದ್ದ ಖಾಸಗಿ ಬಸ್ ಪಲ್ಟಿಯಾಗಿದ್ದು, ಅದೃಷ್ಟವಶಾತ್ ಬಸ್‌ನೊಳಗಿದ್ದ ಇಬ್ಬರು ಪ್ರಯಾಣಿಕರು ಅಪಾಯವಿಲ್ಲದೆ ಪಾರಾಗಿದ್ದಾರೆ.
ಬಸ್‌ನ ಚಾಲಕ ನಿರ್ವಾಹಕ ಇಬ್ಬರಿಗೆ ಸಣ್ಣಪುಟ್ಟ ಗಾಯಗೊಂಡಿದ್ದಾರೆ. ಬಸ್‌ನ ಮುಂಭಾಗದ ಗಾಜು ಪುಡಿಗೈದು ಪ್ರಯಾಣಿಕರು ಬಸ್ಸಿನಿಂದ ಹೊರಬಂದಿದ್ದಾರೆ.
ಭಾನುವಾರ ಆದ ಕಾರಣ ಬಸ್‌ನಲ್ಲಿ ಕೇವಲ ಇಬ್ಬರು ಮಾತ್ರ ಪ್ರಯಾಣಿಕರಿದ್ದರು. ಆದರೆ ಅವರಿಗೆ ಯಾವುದೇ ಗಾಯವಿಲ್ಲದೆ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.