
Mangalore: ಮಂಗಳೂರು ವಿವಿ ಕುಲಪತಿಗಳ ಫೋನ್ ಹ್ಯಾಕ್!
Sunday, June 16, 2024
ಮಂಗಳೂರು: ಇತ್ತೀಚಿನ ದಿನಗಳಲ್ಲಿ ಫೋನ್ ಹ್ಯಾಕಿಂಗ್ ಸಮಸ್ಯೆ ಹೆಚ್ಚಾಗುತ್ತಿದೆ. ಗಣ್ಯ ವ್ಯಕ್ತಿಗಳನ್ನೇ ಟಾರ್ಗೆಟ್ ಮಾಡಿ ಹ್ಯಾಕರ್‌ಗಳು ಅವರ ಹೆಸರಿನಲ್ಲಿ ವಂಚಿಸುವ ಘಟನೆಗಳು ನಡೆಯುತ್ತಿವೆ. ಶನಿವಾರ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಪಿ.ಎಲ್.ಧರ್ಮ ಅವರ ಮೊಬೈಲ್ ಕೂಡ ಹ್ಯಾಕ್ ಆಗಿತ್ತು. ಇದರ ಅರಿವಾಗುತ್ತಿದ್ದಂತೆ ಪ್ರೊ.ಧರ್ಮ ಅವರು ಹ್ಯಾಕ್ ಆಗಿರುವ ಮಾಹಿತಿಯನ್ನು ಸಾರ್ವಜನಿಕರಲ್ಲಿ ಮತ್ತು ಮಾಧ್ಯವದವರಲ್ಲಿ ಹಂಚಿಕೊಂಡಿದ್ದಾರೆ. ವಿಶ್ವ ವಿದ್ಯಾನಿಲಯದ ವೆಬ್‌ಸೈಟ್‌ನಲ್ಲೂ ಮೊಬೈಲ್ ಹ್ಯಾಕ್ ಆಗಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.