Moodubidire: ಆಳ್ವಾಸ್ ಹಲಸು ಮಹಾಮೇಳ ‘ಸಮೃದ್ಧಿ’ ಸಂಪನ್ನ

Moodubidire: ಆಳ್ವಾಸ್ ಹಲಸು ಮಹಾಮೇಳ ‘ಸಮೃದ್ಧಿ’ ಸಂಪನ್ನ


ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ವಿದ್ಯಾಗಿರಿಯ ಮುಂಡ್ರೆದಗುತ್ತು ಕೆ. ಅಮರನಾಥ ಶೆಟ್ಟಿ (ಕೃಷಿ ಸಿರಿ) ವೇದಿಕೆಯಲ್ಲಿ ಆಯೋಜನೆಗೊಂಡ ಸಮೃದ್ಧಿ-ಹಲಸು ವೈವಿಧ್ಯಮಯ ಹಣ್ಣುಗಳು, ಆಹಾರೋತ್ಸವ ಹಾಗೂ ಕೃಷಿ ಪರಿಕರಗಳ ಪ್ರದರ್ಶನ ಮತ್ತು ಮಾರಾಟ ಮಹಾಮೇಳ ಭಾನುವಾರ ಸಂಪನ್ನಗೊಂಡಿತು. ಮಹಾಮೇಳದ ಮೂರನೇ ಹಾಗೂ ಕೊನೆಯ ದಿನದಂದು ಸುತ್ತಮುತ್ತಲಿನ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಹಮ್ಮಿಕೊಳ್ಳುವ ಪ್ರತಿ ಕಾರ‍್ಯಕ್ರಮದಲ್ಲಿ ಸ್ವಚ್ಛತೆಗೆ ಪ್ರಮುಖ ಆದ್ಯತೆ ನೀಡಲಾಯಿತು. ಆಳ್ವಾಸ್ ನುಡಿಸಿರಿ, ಜಂಬೂರಿ, ವಿರಾಸತ್‌ನಂತಹ ಕರ‍್ಯಕ್ರಮಗಳ ಯಶಸ್ಸಿನ ಹಿಂದೆ ವೈಭವದ ಜೊತೆ ಜೊತೆಯಲ್ಲಿ ಸ್ವಚ್ಛತೆಯೆಡೆಗಿನ ಕಾಳಜಿ ಎಲ್ಲರ ಮನಗೆಲ್ಲುತ್ತದೆ. ಅದೇ ರೀತಿ ಈ ಭಾರಿಯ ಸಮೃದ್ಧಿ ಹಲಸು-ವೈವಿದ್ಯಮಯ ಹಣ್ಣುಗಳ ಆಹಾರೋತ್ಸವ ಹಾಗೂ ಕೃಷಿಪರೀಕರಗಳ ಪ್ರದರ್ಶನ ಮತ್ತು ಮಾರಾಟ ಮಹಾಮೇಳದಲ್ಲಿ ಸಾವಿರಾರು ಜನರು ಸೇರಿದ್ದರೂ ಸಂಸ್ಥೆಯ ಸ್ವಚ್ಛತಾ ಸೇನಾನಿಗಳು ಅಹರ್ನಿಶಿ ದುಡಿದಿದ್ದಾರೆ. 

ಸುಮಾರು 30 ಜನ ಕಾರ್ಮಿಕರು ಬೆಳಗ್ಗೆ 7.30 ರಿಂದ ರಾತ್ರಿ 12ರ ವರೆಗೆ ಎರಡು ಪಾಳಿಗಳಲ್ಲಿ ಕೆಲಸ ನಿರ್ವಹಿಸಿದ್ದಾರೆ. 30 ಕಸದ ಡಬ್ಬಗಳು, 60 ಟಾಯ್ಲೆಟ್ ಕೊಠಡಿಗಳು, 40 ವಾಷಿಂಗ್ ಸಿಂಕ್‌ಗಳನ್ನು ಅಳವಡಿಸಲಾಗಿದ್ದು ಕಸದ ವಿಲೇವಾರಿಗೆ 3 ಟ್ರಾಲಿಗಳನ್ನೂ ಬಳಸಲಾಗಿದೆ.

ಸ್ವಚ್ಚತಾ ವಿಭಾಗದ ಮೇಲ್ವಿಚಾರಣೆಯನ್ನು ಪ್ರೇಮನಾಥ್ ಶೆಟ್ಟಿ, ಸುಧಾಕರ್ ಪೂಂಜಾ, ದೇವಿಶ್ ಶೆಟ್ಟಿ, ಹಾಗೂ ಪರಶುರಾಮ್ ನೋಡಿಕೊಂಡಿದ್ದರು. ಆಳ್ವಾಸ್‌ನ ಸ್ವಚ್ಛತೆಯ ಕುರಿತು ಬಂದಿರುವ ಜನರಿಗೂ ಕೂಡಾ ಅರಿವಿರುವುದರಿಂದ ಅವರು ಕೂಡಾ ಎಲ್ಲೆಂದರಲ್ಲಿ ಕಸಗಳನ್ನು ಎಸೆಯದೆ ಸ್ವಚ್ಛತೆಗೆ ಸಹಕರಿಸಿದ್ದಾರೆ. 

ಅಧ್ಯಾಪಕ ಸಂತೋಷ ಮಾಳರ ಕೈಯಿಂದ ಕಲ್ಲಂಗಡಿ ಹಣ್ಣಿನಲ್ಲಿ ಮೂಡಿಬಂದ ವಿವಿಧ ವ್ಯಕ್ತಿಗಳ, ಪಕ್ಷಿ, ಹೂವುಗಳ ಕಲಾಕೃತಿ ಎಲ್ಲರ ಗಮನ ಸೆಳೆಯಿತು. ಮದರ್ ತರೇಸಾ, ಡಾ ಬಿ.ಆರ್. ಅಂಬೇಡ್ಕರ್, ಗಾಂದೀಜಿ, ಸುಭಾಶ್ಚಂದ್ರ ಬೋಸ್, ಕುವೆಂಪು, ಆನಂದ ಆಳ್ವ, ದ್ರೌಪಧಿ ಮುರ್ಮು, ನರೇಂದ್ರ ಮೋದಿ, ಸುಧಾ ಮೂರ್ತಿ, ಕೆ ಅಮರನಾಥ ಶೆಟ್ಟಿ, ವಿರಾಟ್ ಕೊಯ್ಲಿ, ಡಾ ಮೋಹನ ಆಳ್ವ ಕಲಾಕೃತಿಗಳು ಸುಂದರವಾಗಿ ಮೂಡಿಬಂದವು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article