
Bantwal: ಹಳೆಯ ದ್ವೇಷಕ್ಕೆ ಸ್ನೇಹಿತನೇ ಬೈಕ್ ಗೆ ಬೆಂಕಿ ಹಾಕಿದ
Monday, June 17, 2024
ಬಂಟ್ವಾಳ: ಸ್ನೇಹಿತರಿಬ್ಬರ ಹಳೆಯ ದ್ವೇಷಕ್ಕೆ ಬೈಕ್ ಬೆಂಕಿಗಾಹುತಿಯಾದ ಘಟನೆ ಬಂಟ್ವಾಳಕ್ಕೆ ಸಮೀಪದ ಕುಮ್ಡೆಲುವಿನಲ್ಲಿ ನಡೆದಿದೆ.
ಇಲ್ಲಿನ ಚಂದ್ರಹಾಸ ಎಂಬವರಿಗೆ ಸೇರಿದ ಬೈಕ್ ಇದಾಗಿದ್ದು, ಸ್ನೇಹಿತ ನಿತೇಶ್ ಬೈಕ್‌ಗೆ ಬೆಂಕಿ ಹಚ್ಚಿ ಸುಟ್ಟು ಹಾಕಿರುವ ಆರೋಪಿಯಾಗಿದ್ದಾನೆ.
ಈ ಬಗ್ಗೆ ಸುಮಂತ್ ಎಂಬವರು ನೀಡಿದ ದೂರಿನನ್ನಯ ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ಕೇಸು ದಾಖಲಿಸಿ ಆರೋಪಿಯ ಪತ್ತೆಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ