Putturu: ಹೋಟೆಲ್ ಕಾರ್ಮಿಕೆ ಸಾವು-ಕೊಲೆ ಶಂಕೆ

Putturu: ಹೋಟೆಲ್ ಕಾರ್ಮಿಕೆ ಸಾವು-ಕೊಲೆ ಶಂಕೆ


ಪುತ್ತೂರು: ಹೋಟೆಲ್‌ನಲ್ಲಿ ಕಾರ್ಮಿಕೆಯಾಗಿದ್ದ ಮಹಿಳೆಯೊಬ್ಬರು ಮೃತಪಟ್ಟಿದ್ದು, ಈ ಸಾವು ಅಸಹಜ ಎಂಬ ಶಂಕೆ ವ್ಯಕ್ತಗೊಂಡ ಹಿನ್ನಲೆಯಲ್ಲಿ ಉಪ್ಪಿನಂಗಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಉಪ್ಪಿನಂಗಡಿ ಸಮೀಪದ ಪೆರ್ನೆಯ ಬಿಳಿಯೂರು ದರ್ಖಾಸ್ ಎಂಬಲ್ಲಿನ ನಿವಾಸಿ ಹೇಮಾವತಿ (37) ಮೃತಪಟ್ಟವರು. ಈಕೆ ತಾಯಿ ಹಾಗೂ ಅಕ್ಕನ ಮಗನೊಂದಿಗೆ ಮನೆಯಲ್ಲಿದ್ದ ಸಂದರ್ಭ ಈ ಘಟನೆ ನಡೆದಿದ್ದು, ಕೊಲೆಶಂಕೆ ವ್ಕಕ್ತಗೊಂಡ ಹಿನ್ನಲೆಯಲ್ಲಿ 10ನೇ ತರಗತಿ ಓದುತ್ತಿರುವ ಅಕ್ಕನ ಮಗ ಹಾಗೂ ಆತನ ತಂದೆಯನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ.

ಈ ಘಟನೆ ಭಾನುವಾರ ರಾತ್ರಿ ನಡೆದಿದ್ದು, ಆರಂಭದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂಬ ಸುದ್ದಿ ಹರಡಿತ್ತು. ನಂತರ ಇದು ಅಸಹಜ ಸಾವು ಎಂಬ ಸಂಶಯ ವ್ಯಕ್ತವಾಗಿತ್ತು. ಉಪ್ಪಿನಂಗಡಿ ಪೊಲೀಸರ ತನಿಖೆಯಿಂದ ಈ ಸಾವಿನ ನಿಜವಾದ ಸತ್ಯ ಹೊರಬರಬೇಕಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article