
Putturu: ವಿದ್ಯುತ್ ಶಾಕ್ ಯುವಕ ಮೃತ್ಯು
Monday, June 17, 2024
ಪುತ್ತೂರು: ಕಡಬ ತಾಲೂಕಿನ ಪಂಜ ಅಲೆಕ್ಕಾಡಿ ಪ್ರದೇಶದ ಪಿಜಾವ್ ಎಂಬಲ್ಲಿ ವಿದ್ಯುತ್ ಕಂಬದಲ್ಲಿ ಕೆಲಸ ಮಾಡುತ್ತಿದ್ದ ಯುವಕನೊಬ್ಬ ವಿದ್ಯುತ್ ಶಾಕ್ ಹೊಡೆದು ಮೃತಪಟ್ಟ ಘಟನೆ ಸೋಮವಾರ ನಡೆದಿದೆ.
ಗುತ್ತಿಗೆದಾರರ ಬಳಿ ಕೆಲಸ ನಿರ್ವಹಿಸುತ್ತಿದ್ದ ಬೆಳ್ತಂಗಡಿ ತಾಲೂಕಿನ ಮೊಗ್ರುಗ್ರಾಮದ ನಡು ಎರ್ಮಾಲ್ ಎಂಬಲ್ಲಿನ ನಿವಾಸಿ ಪ್ರಕಾಶ್ (29) ಮೃತಪಟ್ಟ ಯುವಕ. ವಿದ್ಯುತ್ ಕಂಬವೇರಿ ಕೆಲಸ ಮಾಡುತ್ತಿದ್ದ ವೇಳೆ ಈತನಿಗೆ ವಿದ್ಯುತ್ ಶಾಕ್ ಹೊಡೆದಿತ್ತು. ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.