Bantwal: ಬಂಟ್ವಾಳದಲ್ಲಿ ಹೆಚ್ಚುತ್ತಿರುವ ಕಳವು ಪ್ರಕರಣ: ಕ್ರಮಕ್ಕೆ ಡಿವೈಎಸ್ಪಿಗೆ ಬೂಡಾ ಅಧ್ಯಕ್ಷರ ಮನವಿ

Bantwal: ಬಂಟ್ವಾಳದಲ್ಲಿ ಹೆಚ್ಚುತ್ತಿರುವ ಕಳವು ಪ್ರಕರಣ: ಕ್ರಮಕ್ಕೆ ಡಿವೈಎಸ್ಪಿಗೆ ಬೂಡಾ ಅಧ್ಯಕ್ಷರ ಮನವಿ


ಬಂಟ್ವಾಳ: ತಾಲೂಕಿನಾದ್ಯಂತ ಇತ್ತೀಚಿಗಿನ ದಿನಗಳಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು,ಜನತೆ ಆತಂಕ ಕ್ಕೊಳಗಾಗಿದ್ದಾರೆ.ಈ ನಿಟ್ಟಿನಲ್ಲಿ ಅಗತ್ಯ ಕ್ರಮಕೈಗೊಂಡು ಇಲಾಖೆ ಜನರಿಗೆ ಧೈರ್ಯ ತುಂಬುವ ಕಾರ್ಯಕ್ಕೆ ಮುಂದಾಗುವಂತೆ ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬೇಬಿ ಕುಂದರ್ ಅವರು ಬಂಟ್ಚಾಳ ಉಪವಿಭಾಗದ ಡಿವೈ ಎಸ್ಪಿಯವರಿಗೆ ಲಿಖಿತವಾಗಿ ಮನವಿ ಮಾಡಿದ್ದಾರೆ.

ಬಂಟ್ವಾಳ ತಾಲೂಕಿನಾದ್ಯಂತ ಇತ್ತೀಚಿಗಿನ ದಿನಗಳಲ್ಲಿ ರಾತ್ರಿ ಮಾತ್ರವಲ್ಲ ಹಗಲು ಹೊತ್ತಿನಲ್ಲು ಪ್ರಾರ್ಥನಾ ಮಂದಿರಗಳಲ್ಲಿ ಕಳ್ಳತನ,ಮನೆ, ಅಂಗಡಿ ದರೋಡೆ,ವಿವಿದೆಡೆಯಲ್ಲಿ ಪಾಕ್೯ ಮಾಡಲಾಗುತ್ತಿರುವ ದ್ವಿಚಕ್ರ ವಾಹನಗಳ ಕಳವು ಪ್ರಕರಣ ಹೆಚ್ಚಾಗುತ್ತಿದ್ದು, ಕೆಲ ಕಳವು ಪ್ರಕರಣಗಳಲ್ಲಿ ಆರೋಪಿಗಳು ಕೂಡ ಪತ್ತೆಯಾಗದಿರುವುದು ತಾಲೂಕಿನ ಜನತೆ ಆತಂಕಕ್ಕೊಳಗಾಗಿದ್ದಾರೆ ಎಂದು ಮನವಿಯಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.

ರಾತ್ರಿ ಹೊತ್ತು ಗಸ್ತನ್ನು ಹೆಚ್ಚಿಸುವುದರ ಮೂಲಕ  ಅಪರಿಚಿತರು ಮತ್ತು ಅಪರಿಚಿತ ವಾಹನಗಳ ಮೇಲೆ ಇಲಾಖೆ ಹೆಚ್ಚಿನ ನಿಗಾವಹಿಸಿ ಮುಂದಿನ ದಿನಗಳಲ್ಲಿ ಇತಂಹ ಘಟನೆಗಳು  ಆಗದಂತೆ  ಕಟ್ಟುನಿಟ್ಟಾಗಿ ಕಾರ್ಯನಿರ್ವಹಿಸಿ ಜನತೆಗೆ ಧೈರ್ಯ ತುಂಬುವ ಕಾರ್ಯ ಪೊಲೀಸ್ ಇಲಾಖೆಯು ನಡೆಸಿ ಇಲಾಖೆಯ ಮೇಲಿನ ನಂಬಿಕೆಯನ್ನು ಹುಸಿಗೊಳಿಸದಂತೆ  ಮನವಿಯಲ್ಲಿ ತಿಳಿಸಿದ್ದಾರೆ.

ಎರಡು ದಿನಗಳ ಹಿಂದೆ ನಗರ ಠಾಣಾ ವ್ಯಾಪ್ತಿಯಲ್ಲಿ ಭಜನಾ ಮಂದಿರ,ದೈವಸ್ಥಾನಗಳಲ್ಲಿ ಸರಣಿ ಕಳ್ಳತನ ನಡೆದಿದ್ದರೆ,ಬಸ್ ತಂಗುದಾಣದಲ್ಲಿ ಪಿಕ್ ಪಾಕೆಟ್ ದಂಧೆ,ಮೇಲ್ಸ್ ತುವೆಯಡಿಯಲ್ಲಿ ಪಾಕ್೯ಮಾಡಲಾಗುತ್ತಿರುವ ದ್ವಿಚಕ್ರವಾಹನಗಳನ್ನು ಎಗ್ಗಿಲ್ಲದೆ ಕಳವು ನಡೆಸಲಾಗುತ್ತಿದ್ದು,ಇದ್ಯಾವುದೇ ಪ್ರಕರಣಗಳು ಇದುವರೆಗೂ ಪತ್ತೆಯಾಗಲಿಲ್ಲ ಎಂಬುದು ಇಲ್ಲಿ ಗಮನಾರ್ಹ ಅಂಶವಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article