Bantwal: ಬಸ್ ಢಿಕ್ಕಿ-ವೃದ್ಧ ಸಾವು
Sunday, June 9, 2024
ಬಂಟ್ವಾಳ: ರಸ್ತೆ ದಾಟುತ್ತಿದ್ದ ವೃದ್ದರೋರ್ವರಿಗೆ ಬಸ್ ಢಿಕ್ಕಿಯಾಗಿ ಮೃತಪಟ್ಟ ಘಟನೆ ಭಾನುವಾರ ರಾ.ಹೆ.ಯ ತುಂಬೆಯಲ್ಲಿ ನಡೆದಿದೆ.
ತುಂಬೆ ಸಮೀಪದ ಮುದಲ್ಮೆಪಡ್ಪು ನಿವಾಸಿ ಸೇಸಪ್ಪ ಪೂಜಾರಿ (89) ಮೃತಪಟ್ಟವರಾಗಿದ್ದಾರೆ. ಮನೆಗೆ ಸಾಮಾನು ತರಲೆಂದು ತುಂಬೆ ಪೇಟೆಗೆ ಬಂದಿದ್ದ ಅವರು ರಸ್ತೆ ದಾಟುತ್ತಿದ್ದ ವೇಳೆ ಮಂಗಳೂರು ಕಡೆಯಿಂದ ಧರ್ಮಸ್ಥಳಕ್ಕೆ ಹೋಗುತ್ತಿದ್ದ ಸರಕಾರಿ ಬಸ್ ಢಿಕ್ಕಿಯಾಗಿದೆ.
ಇದರ ರಭಸಕ್ಕೆ ತಲೆ ಹಾಗೂ ಮುಖಕ್ಕೆ ಗಂಭೀರವಾಗಿ ಗಾಯಗೊಂಡಿದ್ದು, ತಕ್ಷಣ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಅದಾಗಲೇ ಅವರು ಮೃತಪಟ್ಟ ಬಗ್ಗೆ ವೈದ್ಯರು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಬಂಟ್ವಾಳ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.