Beltangadi: ರೆಖ್ಯಾ, ಕೊಕ್ಕಡದಲ್ಲಿ ಮನೆಗೆ ಬಡಿದ ಸಿಡಿಲು-ಹಸು, ಸಾಕು ನಾಯಿ ಬಲಿ, ವಿದ್ಯುತ್ ಉಪಕರಣಗಳಿಗೆ ಹಾನಿ
Monday, June 3, 2024
ಬೆಳ್ತಂಗಡಿ: ಬಾರೀ ಸಿಡಿಲಬ್ಬರಕ್ಕೆ ನಾಯಿ ಹಾಗೂ ಹಸು ಮೃತಪಟ್ಟ ಘಟನೆ ರೆಖ್ಯಾ ಗ್ರಾಮದಲ್ಲಿ ಸಂಭವಿಸಿದೆ.
ಜೂ. 2ರಂದು ಸಂಜೆ ತಾಲೂಕಿನಲ್ಲಿ ಮಳೆಯಾಗಿದ್ದು ಈ ಸಂದರ್ಭದಲ್ಲಿ ರೆಖ್ಯಾ ಗ್ರಾಮದ ಸುಂದರ ಗೌಡ ಕುರುಡೇಲು ಎಂಬವರ ಮನೆಗೆ ಸಿಡಿಲು ಬಡಿದು ಮನೆಯ ವಿದ್ಯುತ್ ವೈಯರುಗಳು, ವಿದ್ಯುತ್ ಉಪಕರಣಗಳು ಸುಟ್ಟು ಹೋಗಿವೆ. ಅಲ್ಲದೆ ಹಟ್ಟಿಯಲ್ಲಿದ್ದ ಹಸು ಹಾಗೂ ಮನೆಯ ಅಂಗಳದಲ್ಲಿದ್ದ ನಾಯಿ ಸಿಡಿಲ ಅಬ್ಬರಕ್ಕೆ ಬಲಿಯಾಗಿವೆ.
ಕೊಕ್ಕಡದಲ್ಲಿ ಮನೆಗೆ ಸಿಡಿಲು ಬಡಿತ:
ಕೊಕ್ಕಡದ ಹಳ್ಳಿಂಗೇರಿಯ ನಿತೇಶ್ ಅವರ ಮನೆಗೆ ಸಿಡಿಲು ವಿದ್ಯುತ್ ಉಪಕರಣಗಳಾದ ಫ್ಯಾನ್, ಮಿಕ್ಸಿ, ಟಿವಿ, ಸ್ವಿಚ್ ಬೋರ್ಡ್ ಇನ್ನಿತರ ಸಾಮಾಗ್ರಿಗಳು ಸುಟ್ಟು ಹೋಗಿದೆ. ಸಧ್ಯ ಎರಡೂ ಮನೆಯವರು ಪ್ರಾಣಪಾಯದಿಂದ ಪಾರಾಗಿದ್ದಾರೆ.





