Mangalore: ಕೆಸಿಇಟಿ 2024ರ ಪರೀಕ್ಷೆಯಲ್ಲಿ ಶಕ್ತಿ ಪದವಿ ಪೂರ್ವ ಕಾಲೇಜಿನ- ವಿದ್ಯಾರ್ಥಿ ರೋಹಿತ್ ಕಲ್ಲುರಾಯಗೆ 194ನೇ ರ‍್ಯಾಂಕ್
ಮಂಗಳೂರು: 2024ನೇ ಸಾಲಿನ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಕೆಸಿಇಟಿ (KCET) ಪರೀಕ್ಷೆಯಲ್ಲಿ, ಶಕ್ತಿ ವಿದ್ಯಾಸಂಸ್ಥೆ ಶಕ್ತಿನಗರ, ಮಂಗಳೂರು ಇದರ 3 ವಿದ್ಯಾರ್ಥಿಗಳು ಉತ್ತಮ ಸಾಧನೆಯನ್ನು ಮಾಡಿರುತ್ತಾರೆ.
ಶಕ್ತಿ ವಿದ್ಯಾಸಂಸ್ಥೆಯ ವಿಜ್ಞಾನ ವಿಭಾಗದಲ್ಲಿ ಕಲಿಯುವ ರೋಹಿತ್ ಕಲ್ಲುರಾಯ ಇಂಜಿನಿಯರಿಂಗ್‌ನಲ್ಲಿ 194ನೇ ರ‍್ಯಾಂಕ್ ಗಳಿಸಿರುತ್ತಾರೆ ಹಾಗೂ ಬಿ ಫಾರ್ಮ ಮತ್ತು ಡಿ ಫಾರ್ಮದಲ್ಲಿ 735 ನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ.
ಕ್ರಮವಾಗಿ ಎನ್ ಹಿತೇಶ್ ಕುಮಾರ್ ಇಂಜಿನಿಯರಿಂಗ್‌ನಲ್ಲಿ 1656 ರ‍್ಯಾಂಕ್ ಮತ್ತು ಪ್ರತೀಕ್ಷಾ ಬಿ.ಪಿ. 1694ನೇ ರ‍್ಯಾಂಕ್ ಪಡೆದಿರುತ್ತಾರೆ. ಇದು ಮಾತ್ರವಲ್ಲದೆ 2000 ದಿಂದ 4000ದ ಒಳಗಡೆ 5 ವಿದ್ಯಾರ್ಥಿಗಳು ರ‍್ಯಾಂಕ್ ಪಡೆದಿರುತ್ತಾರೆ.
ಈ ಸಂದರ್ಭದಲ್ಲಿ ಸಂಸ್ಥೆಯ ಸ್ಥಾಪಕ ಮತ್ತು ಆಡಳಿತಾಧಿಕಾರಿ ಡಾ. ಕೆ.ಸಿ. ನಾಕ್ ಅವರು ವಿದ್ಯಾರ್ಥಿಗಳ ಸಾಧನೆಗೆ ಹರ್ಷ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳಿಗೆ ಹಾಗೂ ಅವರ ಪೋಷಕರಿಗೆ ಅಭಿನಂದಿಸಿದರು. ಅತೀ ಕಡಿಮೆ ವರ್ಷದಲ್ಲಿ ಅತೀ ಹೆಚ್ಚು ಸಾಧನೆ ಮಾಡಲು ಶ್ರಮಿಸಿದ ಸಂಸ್ಥೆಯ ಉಪನ್ಯಾಸಕ ಮತ್ತು ಇತರ ಸಿಬ್ಬಂದಿ ವರ್ಗಕ್ಕೆ ಶುಭಹಾರೈಸಿದರು.
ಶಕ್ತಿ ಎಜ್ಯುಕೇಶನ್ ಟ್ರಸ್ಟ್‌ನ ಪ್ರಧಾನ ಸಲಹೆಗಾರ ರಮೇಶ ಕೆ., ಶಕ್ತಿ ಪಪೂ ಕಾಲೇಜಿನ ಪ್ರಾಂಶುಪಾಲ ವೆಂಕಟೇಶ್ ಮೂರ್ತಿ ಹೆಚ್., ಶಕ್ತಿ ರೆಸಿಡೆನ್ಶಿಯಲ್ ಶಾಲೆಯ ಪ್ರಾಂಶುಪಾಲೆ ಬಬಿತ ಸೂರಜ್, ಎಲ್ಲಾ ಉಪನ್ಯಾಸಕರು ಹಾಗೂ ಉಪನ್ಯಾಸಕೇತರ ಸಿಬ್ಬಂದಿಗಳು ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.