D.K: ಮೂರನೇ ಸ್ಥಾನದಲ್ಲಿ ನೋಟಾ
Tuesday, June 4, 2024
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2024ನೇ ಲೋಕಸಭಾ ಚುನಾವಣೆಯಲ್ಲಿ ನೋಟಾ ಮೂರನೇ ಸ್ಥಾನದಲ್ಲಿ ನಿಂತು ಮತದಾರರ ಕಣ್ಣು ಅರಳಿಸಿದೆ.
23576 ಮತಗಳನ್ನು ನೋಟಾ ಪಡೆದುಕೊಂಡಿದ್ದು, ಜಿಲ್ಲೆಯ ಯಾವ ಅಭ್ಯರ್ಥಿಯೂ ಬೇಡ ಎಂದು ಮತದಾರರು ತಮ್ಮ ಮತವನ್ನು ಚಲಾಯಿಸಿದ್ದಾರೆ.
ಪ್ರಥಮ ಸ್ಥಾನದಲ್ಲಿ ಬಿಜೆಪಿ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ 7,64,132 ಮತಗಳನ್ನು ಪಡೆದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಅವರು 6,14,924 ಮತಗಳನ್ನು ಪಡೆದುಕೊಂಡಿದ್ದಾರೆ.