
Kasaragod: ಬೈಕ್-ಲಾರಿ ನಡುವೆ ಅಪಘಾತ-ಮೃತ್ಯು
Saturday, June 22, 2024
ಕಾಸರಗೋಡು: ಬೈಕ್ ಹಾಗೂ ಲಾರಿ ನಡುವೆ ಉಂಟಾದ ಅಪಘಾತದಲ್ಲಿ ಯುವಕನೊಬ್ಬ ಮೃತಪಟ್ಟ ಘಟನೆ ಕುಂಬಳೆ ಸಮೀಪದ ಆರಿಕ್ಕಾಡಿಯಲ್ಲಿ ನಡೆದಿದೆ . ಕೊಡ್ಯಮ್ಮೆ ಚೆಪ್ಪಿನಡ್ಕದ ಅಸ್ಗರ್ (24) ಮೃತ ಪಟ್ಟವರು.
ಸಹ ಸವಾರ ಅನಾಸ್ ಗಂಭೀರ ಗಾಯಗೊಂಡಿದ್ದು , ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ . ಶುಕ್ರವಾರ ರಾತ್ರಿ ಕುಂಬಳೆ ಸೇತುವೆ ಬಳಿ ಅಪಘಾತ ನಡೆದಿದೆ. ಮಂಗಳೂರಿನಿಂದ ಕಾಸರಗೋಡು ಕಡೆಗೆ ಬರುತ್ತಿದ್ದ ಲಾರಿ ಮತ್ತು ಎದುರಿನಿಂದ ಬರುತ್ತಿದ್ದ. ಬೈಕ್ ನಡುವೆ ಈ ಅಪಘಾತ ನಡೆದಿದೆ.
ಗಂಭೀರ ಗಾಯಗೊಂಡ ಅಸ್ಗರ್‌ನನ್ನು ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ದು ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಕುಂಬಳೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.