Mangalore: ಬಿಜೈನಲ್ಲಿ ಕೆಸರುಮಯ ರಸ್ತೆಯಲ್ಲಿ  ‘ಕೆಸಡೊಂಜಿ ದಿನ’

Mangalore: ಬಿಜೈನಲ್ಲಿ ಕೆಸರುಮಯ ರಸ್ತೆಯಲ್ಲಿ ‘ಕೆಸಡೊಂಜಿ ದಿನ’


ಮಂಗಳೂರು: ನಗರದ ಬಿಜೈ ನ್ಯೂ ರೋಡ್‌ನ ಭಾರತ್ ಮಾತಾ ಸರ್ಕಲ್ ಬಳಿ ಪೂರ್ಣಗೊಳ್ಳದ ರಸ್ತೆ ಕಾಮಗಾರಿಯಿಂದ ಆಕ್ರೋಶಗೊಂಡ ನಾಗರಿಕರು “ಕೆಸಡೊಂಜಿ ದಿನ” ಎನ್ನುವ ಫ್ಲೆಕ್ಸ್ ಅಳವಡಿಸಿದ್ದಾರೆ. 

ಕಳೆದ ನಾಲ್ಕೈದು ತಿಂಗಳುಗಳಿಂದ ಬಿಜೈ ನ್ಯೂ ರೋಡ್ ನ ಭಾರತ್ ಮಾತಾ ಸರ್ಕಲ್ ಬಳಿ ಸರ್ಕಲ್‌ಗೆ ಕಾಂಕ್ರೀಟ್ ಹಾಗೂ ಒಳಚರಂಡಿ ಕಾಮಗಾರಿ ನಡೆಯುತ್ತಿದೆ. ಬಿಜೈ ನ್ಯೂ ರೋಡಿಗೆ ಮುಖ್ಯ ರಸ್ತೆಯಾಗಿರುವುದರಿಂದ ಭಾರತ್ ಮಾತಾ ಜಂಕ್ಷನ್ ನಲ್ಲಿ ನಡೆಯುತ್ತಿರುವ ಕಾಮಗಾರಿಯಿಂದ ಜನರಿಗೆ ದಿನನಿತ್ಯದ ಓಡಾಟಕ್ಕೆ ಕಷ್ಟವಾಗಿತ್ತು, ಈ ನಡುವೆ ಮಳೆಗಾಲ ಆರಂಭವಾಗಿದ್ದು ಕಾಮಗಾರಿ ನಡೆಯುತ್ತಿದ್ದ ಭಾರತ್ ಮಾತಾ ಸರ್ಕಲ್ ಸಂಪೂರ್ಣವಾಗಿ ಕೆಸರುಮಯವಾಗಿದೆ. ಇದರಿಂದ ಶಾಲಾ ಕಾಲೇಜು ಹೋಗುವ ಮಕ್ಕಳಿಂದ ಹಿಡಿದು ಹಿರಿಯ ನಾಗರಿಕರಿಗೆ ಈ ರಸ್ತೆಯಲ್ಲಿ ಓಡಾಡುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ. ಈ ಕಾಮಗಾರಿಯಿಂದ ಆಕ್ರೋಶಗೊಂಡಿರುವ ನಾಗರಿಕರು ಭಾರತ್ ಮಾತಾ ಸರ್ಕಲ್ ಬಳಿ “ಬಿಜೈ ರೋಡ್ ಭಾರತ್ ಮಾತಾ ಸರ್ಕಲ್ ಕೆಸರಡೊಂಜಿ ದಿನ” ಎನ್ನುವ ಫ್ಲೆಕ್ಸ್ ಅಳವಡಿಸಿದ್ದಾರೆ.

ಇನ್ನಾದರೂ ಜನಪ್ರತಿನಿಧಿಗಳು ಜನರ ಸಮಸ್ಯೆಗೆ ಪರಿಹಾರ ಒದಗಿಸುತ್ತಾರೋ ಕಾದು ನೋಡಬೇಕಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article