
Kasaragod: ಸ್ನೇಹಿತನಿಗೆ ಸಂದೇಶ ಮೂಲಕ ಮಾಹಿತಿ ನೀಡಿ ಆತ್ಮಹತ್ಯೆ
Friday, June 28, 2024
ಕಾಸರಗೋಡು: ಸ್ನೇಹಿತನಿಗೆ ಮೊಬೈಲ್ ಸಂದೇಶದ ಮೂಲಕ ಮಾಹಿತಿ ನೀಡಿ ವ್ಯಕ್ತಿಯೋರ್ವ ಚಂದ್ರಗಿರಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ಸಂಜೆ ನಡೆದಿದೆ.
ರಾವೇಣೇಶ್ವರ ಮೊಕೋಡ್ ನಿವಾಸಿ ಅಜೇಶ್ ಪಾಲಕ್ಕಾಲ್ (35) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಮೃತದೇಹ ಇಂದು ಬೆಳಗ್ಗೆ ಚೆಂಬರಿಕ ಕಲ್ಲುವಲಪ್ಪಿನ ಕಡಲ ಕಿನಾರೆಯಲ್ಲಿ ಪತ್ತೆಯಾಗಿದೆ.
ಮೂಕೋಡ್ ಕಲಾರಿಕ್ಕಾಲ್‌ನಲ್ಲಿ ಪಾಲಕ್ಕಾಲ್ ಟ್ರೇಡರ್ಸ್ ಸಂಸ್ಥೆ ನಡೆಸುತ್ತಿದ್ದ ಇವರು ಗುರುವಾರ ಸಂಜೆ ಮೂರು ಗಂಟೆ ಸುಮಾರಿಗೆ ಚಂದ್ರಗಿರಿ ಹೊಳೆಯ ಸಮೀಪ ಸ್ಕೂಟರ್ ಹಾಗೂ ಮೊಬೈಲ್ ಫೋನ್ ಇಟ್ಟು ಬಳಿಕ ಹೊಳೆಗೆ ಹಾರಿದ್ದರೆನ್ನಲಾಗಿದೆ. ಇದಕ್ಕೂ ಮೊದಲು ಅವರು ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ತನ್ನ ಸ್ನೇಹಿತನ ಮೊಬೈಲ್‌ಗೆ ಮೆಸೇಜ್ ಮಾಡಿದ್ದರು.
ಮಾಹಿತಿ ಅರಿತ ಪರಿಸರ ವಾಸಿಗಳು, ಅಗ್ನಿಶಾಮಕ ದಳದ ಸಿಬ್ಬಂದಿ ಪೊಲೀಸರು ಶೋಧ ನಡೆಸಿದ್ದರು. ನದಿ ಉಕ್ಕಿ ಹರಿಯುತ್ತಿರುವುದರಿಂದ ಪತ್ತೆಯಾಗಿರಲಿಲ್ಲ.
ಇಂದು ಬೆಳಗ್ಗೆ ಚೆಂಬರಿಕ ಸಮುದ್ರಕಿನಾರೆಯಲ್ಲಿ ಮೃತ ದೇಹ ಪತ್ತೆಯಾಗಿದೆ.