Kundapura: ಲೈಂಗಿಕ ಕಿರುಕುಳ-ವೈದ್ಯಾಧಿಕಾರಿ ವಿರುದ್ಧ ಪ್ರಕರಣ

Kundapura: ಲೈಂಗಿಕ ಕಿರುಕುಳ-ವೈದ್ಯಾಧಿಕಾರಿ ವಿರುದ್ಧ ಪ್ರಕರಣ

ಕುಂದಾಪುರ: ಲೈಂಗಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದಾರೆಂದು ಸಹೋದ್ಯೋಗಿ ವೈದ್ಯೆ ನೀಡಿದ ದೂರಿನಂತೆ ಕುಂದಾಪುರ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ರಾಬರ್ಟ್ ರೆಬೆಲ್ಲೋ ಅವರ ವಿರುದ್ಧ ಮಾನಭಂಗಕ್ಕೆ ಯತ್ನ ಆರೋಪದಡಿಯಲ್ಲಿ ಪ್ರಕರಣ ದಾಖಲಾಗಿದೆ.

ಕುಂದಾಪುರದ ಸರಕಾರಿ ತಾಲೂಕು ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ವೈದ್ಯೆಗೆ ಕಳೆದ ಆರು ತಿಂಗಳಿನಿಂದ ಲೈಂಗಿಕ ಕಿರುಕುಳ, ಮಾನಸಿಕ ಹಿಂಸೆ ನೀಡಿದ್ದಲ್ಲದೇ ಮಾನಭಂಗಕ್ಕೂ ಯತ್ನಿಸಿದ್ದಾಗಿ ಮಹಿಳಾ ವೈದ್ಯೆ ಕುಂದಾಪುರ ಪೊಲೀಸರಿಗೆ ದೂರು ನೀಡಿದ್ದು, ಅದರಂತೆ ಪೊಲೀಸರು 354, 354A, 504, 506, 509 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. 

ಘಟನೆಯ ವಿವರ: 

32 ವರ್ಷ ಪ್ರಾಯದ ವಿವಾಹಿತ ಮಹಿಳಾ ವೈದ್ಯೆ ಕುಂದಾಪುರದ ಸಾರ್ವಜನಿಕ ತಾಲೂಕು ಆಸ್ಪತ್ರೆಯ ಗುತ್ತಿಗೆ ಆಧಾರದಡಿಯಲ್ಲಿ ವೈದ್ಯಾಧಿಕಾರಿಯಾಗಿ ಅಕ್ಟೋಬರ್ 2023ರಿಂದ ಕೆಲಸ ಮಾಡುತ್ತಿದ್ದಾರೆ. ಕರ್ತವ್ಯದ ಆರಂಭದ ದಿನಗಳಿಂದಲೇ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಯಾಗಿರುವ ಡಾ. ರಾಬರ್ಟ್ ರೆಬೆಲ್ಲೋ ಮೊಬೈಲ್ ಮೂಲಕ ಅಶ್ಲೀಲ ಸಂಭಾಷಣೆ ಮತ್ತು ಸಂದೇಶಗಳನ್ನು ಕಳುಹಿಸುತ್ತಿದ್ದಾರೆಂದು ಅವರು ಆರೋಪಿಸಿದ್ದಾರೆ. 

ಕರ್ತವ್ಯದ ಸಮಯವೂ ಲಂಚ್‌ಗೆ, ಡಿನ್ನರ್‌ಗೆ ಬಾ ಎಂದು ಪೀಡಿಸಿ ಪುಸಲಾಯಿಸುತ್ತಿದ್ದು ಆತನ ಕೋರಿಕೆಗಳನ್ನು ನಿರಾಕರಿ ಸಿದ್ದರಿಂದ ಹತಾಶೆಗೊಳಗಾಗಿ ಅವಾಚ್ಯವಾಗಿ ನಿಂದಿಸಿ, ಜೀವಬೆದರಿಕೆ ಹಾಕಿದ್ದಲ್ಲದೆ ಬಳಿಕ ಮಹಿಳೆಯ ಮೊಬೈಲ್‌ನಲ್ಲಿದ್ದ ಫೋಟೋ ವಿಡಿಯೋ ಹಾಗೂ ಮೆಸೇಜ್ ಗಳನ್ನು ಡಿಲಿಟ್ ಮಾಡುವಂತೆ ಒತ್ತಾಯಿಸಿ ಬೆದರಿಕೆ ಹಾಕಿದ್ದಾಗಿ ವೈದ್ಯೆ ದೂರಿನಲ್ಲಿ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article