Mangalore: ಸಿಇಟಿ-ಮಂಗಳೂರಿನ ಎಕ್ಸ್‌ಪಟ್ ಪಿಯು ಕಾಲೇಜಿಗೆ 2 ಪ್ರಥಮ ರ‍್ಯಾಂಕ್

Mangalore: ಸಿಇಟಿ-ಮಂಗಳೂರಿನ ಎಕ್ಸ್‌ಪಟ್ ಪಿಯು ಕಾಲೇಜಿಗೆ 2 ಪ್ರಥಮ ರ‍್ಯಾಂಕ್


ಮಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಸಿದ ಸಿಇಟಿ ಪರೀಕ್ಷೆಯ ಏಳು ವಿಭಾಗದಲ್ಲಿ ಮಂಗಳೂರಿನ ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ 2 ಪ್ರಥಮ ರ‍್ಯಾಂಕ್ ಸೇರಿದಂತೆ ಮೊದಲ 10 ರ‍್ಯಾಂಕ್‌ಗಳಲ್ಲಿ 19 ರ‍್ಯಾಂಕ್‌ಗಳನ್ನು ಪಡೆದುಕೊಂಡು ಅಭೂತಪೂರ್ವ ಸಾಧನೆ ಮಾಡಿದ್ದಾರೆ.

ನಿಹಾರ್ ಎಸ್.ಆರ್. ಅವರು ಸಿಇಟಿ ಬಿಎನ್‌ವೈಎಸ್ ಮತ್ತು ಬಿಎಸ್ಸಿ ಕೃಷಿಯಲ್ಲಿ ಪ್ರಥಮ ರ‍್ಯಾಂಕ್ ಪಡೆದರೆ, ಪಶುವೈದ್ಯಕೀಯ ಮತ್ತು ನರ್ಸಿಂಗ್‌ನಲ್ಲಿ 3ನೇ ರ‍್ಯಾಂಕ್, ಬಿಫಾರ್ಮಾ ಮತ್ತು ಡಿಫಾರ್ಮಾದಲ್ಲಿ ೫ನೇ ರ‍್ಯಾಂಕ್ ಹಾಗೂ ಎಂಜಿನಿಯರಿಂಗ್‌ನಲ್ಲಿ 12ನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ.

ಅದೇ ರೀತಿ ಸಂಜನಾ ಎಸ್.ಕಟ್ಟಿ ಅವರು ಬಿಎನ್‌ವೈಎಸ್‌ನಲ್ಲಿ 2ನೇ ರ‍್ಯಾಂಕ್, ಬಿಎಸ್ಸಿ ಕೃಷಿಯಲ್ಲಿ 4ನೇ ರ‍್ಯಾಂಕ್, ಪಶುವೈದ್ಯಕೀಯ ಮತ್ತು ನರ್ಸಿಂಗ್‌ನಲ್ಲಿ 6ನೇ ರ‍್ಯಾಂಕ್, ಬಿಫಾರ್ಮಾ ಮತ್ತು ಡಿಫಾರ್ಮಾದಲ್ಲಿ 8ನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ.

ಮಿಹಿರ್ ಗಿರೀಶ್ ಕಾಮತ್ ಅವರು ಬಿಎಸ್ಸಿ ಕೃಷಿಯಲ್ಲಿ ಎರಡನೇ ರ‍್ಯಾಂಕ್, ಸ್ವಸ್ಥಿಕ್ ಎ.ಶರ್ಮಾ ಬಿಎನ್‌ವೈಎಸ್‌ನಲ್ಲಿ 6ನೇ ರ‍್ಯಾಂಕ್, ಆಕರ್ಷ್ ಎಸ್ ಕಂಕನವಾಡಿ ಅವರು ಬಿಎಸ್ಸಿ ಕೃಷಿಯಲ್ಲಿ 8ನೇ ರ‍್ಯಾಂಕ್, ಸುಹಾಸ್ ಎಂ ಅವರು ಪಶು ವೈದ್ಯಕೀಯ ಹಾಗೂ ನರ್ಸಿಂಗ್‌ನಲ್ಲಿ 9ನೇ ರ‍್ಯಾಂಕ್, ಬಿಎನ್‌ವೈಎಸ್‌ನಲ್ಲಿ 10ನೇ ರ‍್ಯಾಂಕ್ ಹಾಗೂ ಪ್ರಣವ್ ಟಾಟಾ ಆರ್ ಅವರು ಬಿಎಸ್ಸಿ ಕೃಷಿಯಲ್ಲಿ 9ನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ.

ಏಳು ವಿಭಾಗದ ಮೊದಲ 15 ರ‍್ಯಾಂಕ್‌ಗಳಲ್ಲಿ ಎರಡು ಪ್ರಥಮ ಸೇರಿದಂತೆ ಒಟ್ಟು ಏಳು ರ‍್ಯಾಂಕ್‌ಗಳನ್ನು ನಿಹಾರ್ ಎಸ್.ಆರ್. ಪಡೆದುಕೊಂಡು ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಕಳೆದ 20 ವರ್ಷಗಳಲ್ಲಿ ಬೋರ್ಡ್ ಸೇರಿದಂತೆ ನಾನಾ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ 23 ಬಾರಿ ಪ್ರಥಮ ರ‍್ಯಾಂಕ್ ಪಡೆದಿರುವ ಮಂಗಳೂರಿನ ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜು ಈ ವರ್ಷವೂ ಅಭೂತಪೂರ್ವ ಫಲಿತಾಂಶ ದಾಖಲಿಸಿದೆ ಎಂದು ಸಂಸ್ಥೆಯ ಅಧ್ಯಕ್ಷ ಪ್ರೊ. ನರೇಂದ್ರ ಎಲ್. ನಾಯಕ್ ತಿಳಿಸಿದರು.

ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರ ಸಾಂಘಿಕ ಪ್ರಯತ್ನದಿಂದಾಗಿ ಉತ್ತಮ ಫಲಿತಾಂಶ ಬಂದಿದೆ. ‘ಶ್ರಮ ಏವ ಜಯತೆ’ ಎಂಬ ಸಂಸ್ಥೆಯ ಧ್ಯೇಯ ವಾಕ್ಯವನ್ನು ವಿದ್ಯಾರ್ಥಿಗಳು ಸಾಕಾರಗೊಳಿಸಿರುವ ಬಗ್ಗೆ ಹೆಮ್ಮೆಯಾಗುತ್ತಿದೆ. ಈ ಎಲ್ಲ ವಿದ್ಯಾರ್ಥಿಗಳು ಅಭಿನಂದನಾರ್ಹರು ಎಂದು ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ. ನರೇಂದ್ರ ಎಲ್. ನಾಯಕ್ ಅವರು ತಿಳಿಸಿದ್ದಾರೆ.



Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article